ಮೂಡುಬಿದರೆ: ಅಖಿಲ ಭಾರತ ಕಾರ್ಮಿಕ ಸಂಘ ಹಾಗೂ ಶಿರ್ತಾಡಿ ಗ್ರಾಮಸ್ಥರು ಮೂಡುಕೊಣಾಜೆ ಜಂಕ್ಷನ್‍ನಲ್ಲಿ ಶುಕ್ರವಾರ ಬೆಳಿಗ್ಗೆ 3 Pಟಿಪ್ಪರ್‍ಗಳನ್ನು ತಡೆದ ಪ್ರಸಂಗ ನಡೆದಿದೆ.
ಮಕ್ಕಳು ಬೆಳಿಗ್ಗೆ ಶಾಲೆಗೆ ಹೋಗುವ ಸಮಯ ಹಾಗೂ ಶಾಲೆಯಿಂದ ಸಂಜೆ ಮನೆಗೆ ತೆರಳುವ ಸಮಯದಲ್ಲಿ ಕ್ರಷರ್ ಟಿಪ್ಪರ್ ಓಡಾಟವನ್ನು ನಿಷೇಧಿಸಬೇಕೆಂದು ಗುರುವಾರ ಕಾರ್ಮಿಕ ಸಂಘದವರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಶುಕ್ರವಾರ ಬೆಳಗ್ಗೆ 9.15ರ ವೇಳೆಗೆ ಮಂಗಳೂರಿನಿಂದ ಬೋರುಗುಡ್ಡೆ ಕ್ರಷರ್‍ಗೆ ಬರುತ್ತಿದ್ದ 2 ಹಾಗೂ ಅಳಿಯೂರು ಕ್ರಷರ್‍ನಿಂದ ಮೂಡುಬಿದರೆ ಕಡೆಗೆ ಬರುತ್ತಿದ್ದ ಲೋಡ್ ತುಂಬಿದ ಟಿಪ್ಪರ್ ಅನ್ನು ಕಾರ್ಮಿಕ ಸಂಘದವರು ಗ್ರಾಮಸ್ಥರು ಸಹಕಾರದೊಂದಿಗೆ ತಡೆದಿದ್ದಾರೆ.

mbd_july17_4ಕಾರ್ಮಿಕ ಸಂಘದ ವಕ್ತಾರ ಸುಧತ್ತ ಜೈನ್ ಈ ಬಗ್ಗೆ ಪತ್ರಿಕೆ ಮಾಹಿತಿ ನೀಡುತ್ತಾ, ಮೂಡುಬಿದರೆ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಅವರಿಗೆ ನನಗೆ ದೂರವಾಣಿ ಮುಖಾಂತರ ಸಂಪರ್ಕಿಸಿ, ಟಿಪ್ಪರ್ ಮಾಲೀಕರೊಂದಿಗೆ ಶೀಘ್ರದಲ್ಲಿ ಸಭೆ ಕರೆಯುತ್ತೇವೆ. ನಾಳೆಯಿಂದಲೇ ಟಿಪ್ಪರ್ ಸಂಚಾರವನ್ನು ಬೆಳಗ್ಗೆ ಹಾಗೂ ಸಂಜೆ ಹೊತ್ತಿಗೆ ತಡೆಯುವುದಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಮನವರಿಕೆ ಮಾಡಿದ ಬಳಿಕ ಟಿಪ್ಪರ್ ತಡೆಯನ್ನು ಹಿಂತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *