ಜಾಗತಿಕ ಸವಾಲಿಗೆ ಸಿದ್ದರಾಗಲು ಕರೆ
ವಾಮಂಜೂರು: ಜಾಗತೀಕರಣದಿಂದ ಸ್ಪಧಾತ್ಮಕಯುಗ ಸೃಷ್ಟಿಯಾಗಿದ್ದು ಅದರ ಸವಾಲಿಗೆ ವಿದ್ಯಾರ್ಥಿಗಳು ತಯಾರಾಗುವುದು ಅತ್ಯಾವಷ್ಯಕ ಎಂದು ಮಂಗಳೂರು ಆಕಾಶವಾಣಿ ಸಹಾಯಕ ನಿದೇರ್ಶಕ ವಸಂತಕುಮಾರ್ ಪೆರ್ಲ ಹೇಳಿದ್ದಾರೆ.
ವಾಮಂಜೂರಿನ ಸೈಂಟ್‍ರೇಮಂಡ್ ಪದವಿ ಕಾಲೇಜಿನ ಸ್ಥಾಪಕ ದಿನಾಚರಣೆ ಮತ್ತು ವಿದ್ಯಾರ್ಥಿ ಸಂಘಗಳ ಚಟುವಟಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ನಾವೆಷ್ಟು ಕ್ರಿಯಾಶೀಲರಾಗಿದ್ದರೂ ಸಾಲದು.ಸೃಜನಶೀಲ ವ್ಯಕ್ತಿತ್ವ ನಿರ್ಮಾಣವಾಗಬೇಕಾದರೆ ನಾವು ಪ್ರತಿಭಾವಂತರಾಗುವುದು ಅಗತ್ಯ. ಗ್ರಾಮೀಣ ಪ್ರದೇಶದಲ್ಲಿ ಶಾಲೆಯನ್ನು ಸ್ಥಾಪಿಸಿ ಅಲ್ಲಿನ ಶಿಕ್ಷಣವಂಚಿತರಿಗೆ ಶಿಕ್ಷಣ ಒದಗಿಸುವುದು ಕಾಲೇಜಿನ ಸ್ಥಾಪಕ ಫಾದರ್ ರೇಮಂಡ್ ಮಸ್ಕರೇನಸ್ ಕನಸಾಗಿತ್ತುಎಂದವರು ನೆನಪಿಸಿಕೊಂಡರು.
ಕಾರ್ಯಕ್ರಮದ ಆರಂಭದಲ್ಲಿ ಕಾಲೇಜು ಸ್ಥಾಪಕ ಫಾದರ್ ರೇಮಂಡ್ ಕಮೀಲಸ್ ಮಸ್ಕರೇನಸ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.ಕಾರ್ಯಕ್ರದ ಅಧ್ಯಕ್ಷತೆಯನ್ನು ಪ್ರಿನ್ಸಿಪಾಲ್ ಡಾ.ಸೆಲಿನ್‍ವಾಸ್ ವಹಿಸಿದ್ದರು.ವೇದಿಕೆಯಲ್ಲಿ ಉಪಪ್ರಾಂಶುಪಾಲೆ ಸಗಯಾ ಸೆಲ್ವಿ, ಕಚೇರಿ ಮೇಲ್ವಿಚಾರಕಿ ಡೌರಿಸ್, ಸಿಸ್ಟರ್‍ಗಳಾದ ,ಸುಗುಣಾ,ರೀನಾ,ಆಶಾ,ರೇಷ್ಮಾ ಉಪಸ್ಥಿತರಿದ್ದರು.ರುಬಿನಾ ಮತ್ತು ಸುಮಯ್ಯ ಕಾರ್ಯಕ್ರಮ ನಿರೂಪಿಸಿದರು.ಉಪನ್ಯಾಸಕಿ ಪ್ರೀಮಾ ಸ್ವಾಗತಿಸಿ ವಂದಿಸಿದರು.



