ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘದ ವತಿಯಿಂದ ದ.ಕ ಮತ್ತು ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತುಗಳಿಗೆ ನೂತನವಾಗಿ ಆಯ್ಕೆಯಾದ ಸಮಾಜ ಬಾಂಧವರಿಗೆ ಅಭಿನಂದನಾ ಸಮಾರಂಭ ಜುಲೈ 19ರಂದು ಭಾನುವಾರ ಬೆಳಿಗ್ಗೆ 9.30ಕ್ಕೆ ಎ.ಬಿ.ಶೆಟ್ಟಿ ಸಭಾಂಗಣ ಬಂಟ್ಸ್‍ಹಾಸ್ಟೆಲ್‍ನಲ್ಲಿ ಜರಗಲಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್‍ಕುಮಾರ್ ರೈ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಜಿತ್‍ಕುಮಾರ್ ರೈ ಅವರು ಸಮಾರಂಭದಲ್ಲಿ ಸಾವಿರಕ್ಕೂ ಮಿಕ್ಕಿದ ಪಂಚಾಯತ್ ಸದಸ್ಯರು ಭಾಗವಹಿಸಲಿದ್ದಾರೆ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮುಂಬೈ ಲೋಕಸಭಾ ಸದಸ್ಯ ಗೋಪಾಲ್ ಶೆಟ್ಟಿ ನೆರವೇರಿಸಲಿದ್ದಾರೆ. ಮಾಜಿ ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಾತೃಸಂಘದ ಅಧ್ಯಕ್ಷ ಅಜಿತ್‍ಕುಮಾರ್ ರೈ ಮಾಲಾಡಿ ವಹಿಸಲಿದ್ದಾರೆ.

ಬಂಟ ಸಮಾಜವು, ಅನಾದಿಕಾಲದಿಂದಲೂ ಧಾರ್ಮಿಕ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಎಲ್ಲಾ ಜಾತಿ ಮತ ವರ್ಗಗಳ ಜನರ ಕಷ್ಟ ಸುಖ ದುಃಖಗಳಲ್ಲಿ ಬಾಗಿಯಾಗಿ ಎಲ್ಲರನ್ನು ಅರಿತುಕೊಂಡು ಸಾಮರಸ್ಯದ ಸಹಜೀವನವನ್ನು ನಡೆಸಿ ತಮ್ಮ ಅನುಕರಣೀಯ ನಡತೆಯಿಂದ ಎಲ್ಲಾ ಜಾತಿ, ಮತ ಬಾಂಧವರ ಪ್ರೀತ್ಯಾದರಗಳನ್ನು ಗಳಿಸಿ ಗೌರಾ£್ವತ ಸ್ಥಾನಮಾನಗಳನ್ನು ಪಡೆದುಕೊಂಡಿದೆ. ಎಂದು ಅಜಿತ್‍ಕುಮಾರ್ ತಿಳಿಸಿದರು.
ಇತ್ತೀಚೆಗೆ ಗ್ರಾಮ ಪಂಚಾಯತುಗಳಿಗೆ ಜರಗಿದ ಚುನಾವಣೆಯಲ್ಲಿ ಗಣ£ೀಯ ಸಂಖ್ಯೆಯ ಬಂಟ ಸಮಾಜದ ಅಭ್ಯರ್ಥಿಗಳು ವಿಜಯಗಳಿಸಿರುತ್ತಾರೆ. ಆ ಮುಖೇನ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಪ್ರಗತಿಯಾಗಲು ಸಾಧ್ಯ. ನೂತನವಾಗಿ ಆಯ್ಕೆಯಾದ ಸಮಾಜದ ಬಂಧುಗಳನ್ನು ಅಭಿನಂದಿಸುವುದರಿಂದ ಅವರು ಇನ್ನೂ ಹೆಚ್ಚಿನ ಉತ್ಸಾಹದಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸೇವೆ ಸಲ್ಲಿಸಲು ಪೆÇೀತ್ಸಾಹಿಸಿದಂತಾಗುವುದು. ಮಾತ್ರವಲ್ಲದೆ ಸಂಘವು ಗ್ರಾಮೀಣ ಪ್ರದೇಶದ ಎಲ್ಲಾ ಸಮಾಜ ಬಾಂಧವರೊಂದಿಗೆ ಇನ್ನೂ ಹೆಚ್ಚಿನ ನಿಕಟ ಬಾಂಧವ್ಯವನ್ನು ಉಳಿಸಲು ಮತ್ತು ಬೆಳೆಸಲು ಸಹಕಾರಿಯಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಂಗಳೂರು ತಾಲೂಕು ಸಮಿತಿ ಸಂಚಾಲಕ ಯಸ್.ಜಯರಾಮ ಸಾಂತ, ಸಹ ಸಂಚಾಲಕ ಉಮೇಶ ರೈ, ದಿವಾಕರ ಸಾಮಾನಿ, ಸಂಚಾಲಕರು ಅಭಿನಂದನಾ ಕಾರ್ಯಕ್ರಮ ಸಮಿತಿ, ಉಲ್ಲಾಸ ಶೆಟ್ಟಿ, ಸಮನ್ವಯಕಾರರು ಉಪಸ್ಥಿತರಿದ್ದರು.