ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಛಾಯಾಗ್ರಾಹಕರ ಸಂಘದ ವತಿಯಿಂದ ಕೊಡಂಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ‘ಔಷಧೀಯ ಗುಣವುಳ್ಳ ಸಸ್ಯಗಳ ವಿತರಣಾ ಕಾರ್ಯಕ್ರಮವನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯೇಶ್ವರ ರಾವ್ ಉದ್ಘಾಟಿಸಿದರು.

ಅವಶ್ಯ ಫೌಂಡೇಶನ್ ಪ್ರಬಂಧಕ ಸುರೇಂದ್ರ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಮುಖ್ಯ ಶಿಕ್ಷಕಿ ಸೋನಿತಾ.ಕೆ, ಸಂಘದ ವಲಯಾಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕೆ., ಉಪಾಧ್ಯಕ್ಷ ಸುಕುಮಾರ್, ಮಾಜಿ ಅಧ್ಯಕ್ಷ ದಯಾನಂದ ಬಂಟ್ವಾಳ ಮತ್ತಿತರರು ಇದ್ದರು.