ಬಂಟ್ವಾಳ : ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರಿಂದ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಪರಾಭವಗೊಂಡ ಅಭ್ಯರ್ಥಿಗಳ ಮನೆ ಭೇಟಿ ಕಾರ್ಯಕ್ರಮದನ್ವಯ ಮಂಗಳವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾವಳಮೂಡೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಮನೆಭೇಟಿ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಮಾತನಾಡಿದ ರಾಜೇಶ್ ನಾಕ್ ಆವರು ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ನಡೆಸಬೇಕು ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಮೂಲಕ ಗ್ರಾಮದ ಜನರ ವಿಶ್ವಾಸ ಪಡೆದುಕೊಳ್ಳಬೇಕು ಎಂದು ಹೇಳಿದರು. ಗ್ರಾ.ಪಂ.ನ ಸೋಲಿನ ಬಗ್ಗೆ ಕಾರಣಗಳನ್ನು ವಿಮರ್ಸೆ ಮಾಡಲಾಯಿತು. ಮುಂದೆ ಗೆಲುವು ಸಾಸಲು ಮಾಡಬೇಕಾದ ಜವಾಬ್ದಾರಿಯುತ ಕೆಲಸಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಒಟ್ಟು 12 ಸ್ಥಾನಗಳಲ್ಲಿ 2 ಕ್ಷೇತ್ರಗಳಲ್ಲಿ ಸ್ರ್ಪಸಿದ ಬೇಬಿ ಶೆಟ್ಟಿ ಇಚ್ಚಿಲ, ಮತ್ತು 9 ಮಂದಿ ಅಭ್ಯರ್ಥಿಗಳಾದ ಅಬ್ದುಲ್ ಖಾದರ್ ಸಾಹೇಬ್ ಇಚ್ಚಿಲ, ವಸಂತಿ ಯುವರಾಜ ಆಚಾರ್ಯ, ಸುಜಾತ ನಾಯ್ಕ , ಗುಲಾಬಿ, ಶೇಷಗಿರಿ ಪೂಜಾರಿ, ಸುಂದರಿ, ರವಿಪ್ರಕಾಶ್ ಐತಾಳ, ಸುಧಾ ಎಚ್. ರೈ ಅವರ ಮನೆಗಳಿಗೆ ರಾಜೇಶ್ ನಾಕ್ ಮತ್ತು ತಂಡ ಭೇಟಿ ನೀಡಿದರು.
ಈ ವೇಳೆ ಭಾರತೀಯ ಜನತಾ ಪಾರ್ಟಿಯ ಮಹಾ ಸಂಪರ್ಕ ಅಭಿಯಾನ 2015ರ ಸದಸ್ಯತ್ವ ನೋಂದಣಿ ಮತ್ತು ಮಹಾಸಂಪರ್ಕ ಅಭಿಯಾನದ ಕರಪತ್ರಗಳನ್ನು ವಿತರಣೆ ನಡೆಸಲಾಯಿತು.
ಬಿ.ಜೆ.ಪಿ. ಪ್ರಮುಖರಾದ ಎಂ.ತುಂಗಪ್ಪ ಬಂಗೇರ, ದೇವದಾಸ ಶೆಟ್ಟಿ , ರಮಾನಾಥ ರಾಯಿ, ಮೋಹನ ಆಚಾರ್ಯ, ಜಯಲಕ್ಷ್ಮಿ , ರಾಜಗೋಪಾಲ ನಾಯಕ್, ಬಾಬು ಪೂಜಾರಿ ಕೋಡಿಮನ್ಯ , ಪದ್ಮ ನಾಯ್ಕ , ಹರೀಶ್ ಆಚಾರ್ಯ, ವಿಶ್ವನಾಥ ದೇವಾಡಿಗ, ಸಂಜೀವ ಆಚಾರ್ಯ, ಯೋಗೀಶ ಪೂಜಾರಿ, ಗಣಪತಿ ನಾಯಕ್, ಗಂಗಾಧರ ಪ್ರಭು, ಭೋಜ ನಾಯ್ಕ , ರತ್ನಾಕರ ನಾಯಕ್, ಸೂರ್ಯಹಾಸ ಆಚಾರ್ಯ, ವಸಂತ, ಮಾರಪ್ಪ ಪೂಜಾರಿ, ನಾರಾಯಣ ಪೂಜಾರಿ, ತಾರಾನಾಥ, ಹರೀಶ್ಚಂದ್ರ ರೈ , ರಾಮಚಂದ್ರ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
