ಉಳ್ಳಾಲ: ಜು.28 : ಈದ್ ಸ್ನೇಹ ಕೂಟ ಪರಸ್ಪರ ಪ್ರೀತಿ ವಿಶ್ವಾಸವನ್ನು ಬೆಳೆಸುವ ಕೂಟವಾಗಿದೆ. ಈದ್ನ ಮಹತ್ವವನ್ನು ಪರಸ್ಪರ ಹಂಚಲು ಎಲ್ಲರನ್ನು ಕರೆದು ಇಂತಹ ಕೂಟವನ್ನು ಏರ್ಪಡಿಸಿದಲ್ಲಿ ಮಾತ್ರ ಸಾಧ್ಯ. ಇದರಿಂದ ಎಲ್ಲಾ ಧರ್ಮದವರಿಗೂ ಈದ್ನ ಮಹತ್ವ ಅರ್ಥವಾಗುತ್ತದೆ ಎಂದು ಸಚಿವ ಯು.ಟಿ. ಖಾದರ್ ಎಂದು ಹೇಳಿದರು. ಖಾದರ್ ಅವರು ಜಮಾಅತೆ ಇಸ್ಲಾಂ ಹಿಂದ್ ಉಳ್ಳಾಲ ಇದರ ಆಶ್ರಯದಲ್ಲೊ ತೊಕ್ಕೊಟ್ಟು ಯುನಿಟಿ ಹಾಲ್ನಲ್ಲಿ ಶುಕ್ರವಾರ ಈದ್ ಸ್ನೇಹ ಕೂಟ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.
24eid koota
ನಾನು ನೆಮ್ಮದಿಯ ಜೀವನ ಮಾಡಬೇಕು, ಅದೇ ರೀತಿ ಉಳಿದವರು ಕೂಡಾ ನೆಮ್ಮದಿಯಿಂದ ಬದುಕಬೇಕು ಎಂಬ ಗುರಿ ನಮ್ಮಲ್ಲಿರಬೇಕು. ವಿವಿಧ ಧರ್ಮಗಳು ಇಲ್ಲಿದ್ದರೂ ಎಲ್ಲರೂ ಐಕ್ಯತೆಯಿಂದ ಜೀವಿಸಿದರೆ ಮಾತ್ರ ಶಾಂತಿ ನೆಲಸಬಹುದು. ಅದಕ್ಕೆ ನಾವು ಅವಕಾಶ ಮಾಡಬೇಕು. ಜವಾಬ್ದಾರಿಯುತ
ಸ್ಥಾನದಲ್ಲಿದ್ದವರು ಸಮಾಜವನ್ನು ಹತ್ತಿಕ್ಕುವುದನ್ನು ತಡೆಗಟ್ಟಲು ದುಷ್ಟ ಶಕ್ತಿಗಳನ್ನು ದೂರ ಮಾಡಬೇಕಾದ ಕೆಲಸ ಮಾಡಬೇಕಾದುದು ಅನಿವಾರ್ಯ. ಜಾತಿ ಹಲವು ಇದ್ದರೂ ರಕ್ತದ ಬಣ್ಣ ಒಂದೇ. ರೋಗಿಗಳು ಚಿಕಿತ್ಸೆ ಪಡೆಯಲು ವೈದ್ಯರ ಬಳಿ ತೆರಳುವಾಗ ಜಾತಿ ಧರ್ಮ ನೊಡುವುದಿಲ್ಲ. ಅದೇ ರೀತಿ ಉಳಿದ
ಕೆಲಸಗಳಲ್ಲಿ ಜಾತಿ ಧರ್ಮ ನೋಡಬಾರದು ಎಂದರು. ಸಾಕಿಬ್ ಹಸನ್ ಕುರಾನ್ ಪಠಿಸಿದರು.

ಶರ್ಪುದ್ದೀನ್ ಈದ್ ಸಂದೇಶ ನೀಡಿದರು. ಕರಾವಳಿ ಕಾಲೇಜು ಉಪನ್ಯಾಸಕ ಮುಹಮ್ಮದ್ ಮುಬೀನ್ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಡಾ. ರಾಜೇಶ್ ಶೆಟ್ಟಿ, ಡಾ. ಝಡ್ ಕೆ ಮಿಸ್ರಿ, ಪ್ರಸಾದ ರೈ ಕಲ್ಲಿಮಾರ್, ಜೋಸ್ಲಿನ್ ಡಿ ಸೋಜ, ಅಬ್ದು ಸಲಾಂ, ಉಸ್ಮಾನ್ಕಲ್ಲಾಪು, ಸದಾನಂದ ಬಂಗೇರ, ಸಮಾಜ ಸೇವಕ ಮುಹಮ್ಮದ್ ರಾಝಿಕ್, ಎಎಚ್ ಮಹಮೂದ್ ಮೊದಲಾದವರು ಉಪಸ್ಥಿತರಿದ್ದರು. ಮುಝಮ್ಮಿಲ್ ಅಹ್ಮದ್ ವಂದಿಸಿದರು.

By suddi9

Leave a Reply

Your email address will not be published. Required fields are marked *