ಮಂಗಳೂರು: ದೇಶ ಕಂಡ ಮಹಾನ್ ಅಣುವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅಸ್ತಂಗತರಾದ ಹಿನ್ನೆಲೆಯಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜ್‍ನಲ್ಲಿ ಸಂತಾಪ ಸೂಚಿಸಲಾಯಿತು.
ಕಲಾಂ ಸೈಂಟ್ ಅಲೋಶಿಯಸ್ ಕಾಲೇಜ್‍ಗೆ ಭೇಟಿ ನೀಡಿದ್ದ ಸಂದರ್ಭವನ್ನು ಮೆಲುಕು ಹಾಕಲಾಯಿತು. 2013ರಂದು ಕಾಲೇಜ್‍ಗೆ ಭೇಟಿ ನೀಡಿದ್ದ ಕಲಾಂ ಅವರು ಉನ್ನತ ಶಿಕ್ಷಣಕ್ಕಾಗಿ ನಿರ್ಮಿಸಿದ್ದ ಕಟ್ಟಡವನ್ನು ಉದ್ಘಾಟಿಸಿದ್ದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಂವಾದವನ್ನು ಇಟ್ಟುಕೊಂಡಿದ್ದ ಬಗ್ಗೆ ಮೆಲುಕು ಹಾಕಲಾಯಿತು.
ಕಲಾಂ ದಿವ್ಯಾತ್ಮಕ್ಕೆ ಶಾಂತಿ ಸಿಗಲೆಂದು ಕಾಲೇಜ್‍ನಲ್ಲಿ ಮೌನಪ್ರಾರ್ಥನೆ ನಡೆಸಲಾಯಿತು. ಭಗವದ್ಗೀತೆಯ ಶ್ಲೋಕ, ಕುರಾನ್ ಹಾಗೂ ಬೈಬಲ್‍ನ ಶ್ಲೋಕ ವಾಚಿಸಲಾಯಿತು. ಮಿಸೈಲ್ ಮಾನವನ ಸಾಧನೆಯನ್ನು ಬಣ್ಣಿಸಲಾಯಿತು. ಕಾಲೇಜ್ ಪ್ರಾಂಶುಪಾಲ ಫಾ. ಸ್ವೀಬರ್ಟ್ ಡಿಸಿಲ್ವಾ ಎಸ್‍ಜೆ ಕಲಾಂ ಅವರ ಸಾಧನೆಯನ್ನು ಬಣ್ಣಿಸಿದರು.
ದೇಶದ ಅತ್ಯನ್ನತ ಸಾಧಕ, ಟೆಕ್ನಾಲಜಿ ಮಾನವ ಹಾಗೂ ಒಬ್ಬ ದಿವ್ಯ ವಿಜ್ಞಾನಿಯನ್ನು ಕಳೆದುಕೊಂಡಿದೆ ಎಂದು ಅವರು ಸಂತಾಪ ಸೂಚಿಸಿದರು. ಕಲಾಂ ಸಾವನ್ನು ಜೀರ್ಣಿಸಿಕೊಳ್ಳುವುದು ಕಷ್ಟ, ಆದರೆ ಅವರ ಆದರ್ಶ ನಮ್ಮ ಹೃದಯದಲ್ಲಿ ನಿಲ್ಲುತ್ತದೆ. ಕಲಾಂ ಕಂಡ ಕನಸು 2020ರಲ್ಲಿ ನನಸಾಗುತ್ತದೆ ಎಂದು ನುಡಿದರು.





