ಬಂಟ್ವಾಳ: ವೀರಕಂಭ ಹಾಲು ಉತ್ಪಾದಕರ ಸಹಕಾರ ಸಂಘ ನಿ. ವೀರಕಂಭ ಇದರ 2014-15 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಆ.04 ಮಂಗಳವಾರ ಸಂಘದ ಆವರಣದಲ್ಲಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ವೀರಪ್ಪ ಎಂ. ರವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘದ ನಿರ್ದೇಶಕರಾದ ಶ್ರೀಮತಿ ಲಕ್ಷ್ಮಿ, ಶ್ರೀಯುತ ತ್ರಿವಿಕ್ರಮ ಭಟ್ ಸದಸ್ಯರಾದ ಶ್ರೀಯುತ ಗಂಗಯ್ಯ ಗೌಡ ಮೈರ, ಹಾಗೂ ಶ್ರೀಯುತ ವಸಂತ ಶೆಟ್ಟಿ ನಡುವಳಚ್ಚಿಲ್ ಇವರುಗಳು ಸದ್ರಿ ವರ್ಷದಲ್ಲಿ ಮರಣ ಹೊಂದಿದು ಅವರಿಗೆ ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದ.ಕ. ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಶ್ರೀಮತಿ ಜಾನೆಟ್ ರೊಸಾರಿಯೋ ಹಾಲಿನ ಸಂಘದಿಂದ ಸಿಗುವ ಸವಲತ್ತುಗಳು ಜಾನುವಾರುಗಳ ಸಾಕಣಿಕೆ, ಹಾಲಿಗೆ ಹೆಚ್ಚಿನ ದರ ಪಡೆಯುವಲ್ಲಿ ಹಾಲಿನ ಗುಣ ಮಟ್ಟ ಹೆಚ್ಚಿಸಲು ರಾಸುಗಳನ್ನು ಬೆಳೆಸುವ ರೀತಿಯಲ್ಲಿ ಹಾಲಿನ ಹೆಚ್ಚಳಕ್ಕೆ ಏಒಈ ನಿಂದ ಪಡೆಯಬಹುದಾದ ವಿಶೇóಷ ಸವಲತ್ತುಗಳ ಬಗ್ಗೆ ಅಭಿವೃದ್ಧಿ ಸಂಸ್ಥೆ ಹಾಗೂ ಪಶುಪಾಲನಾ ಇಲಾಖೆಯ ಆಶ್ರ್ರಯದಲ್ಲಿ ಜಾನುವಾರುಗಳಲ್ಲಿ ವಿಮಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಹಾಲು ಹಾಕುವ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹದಾಯಕವಾಗಿ ಫೈಬರ್ ಕುರ್ಚಿಗಳನ್ನು ನೀಡಲಾಯಿತು. ಕಾರ್ಯದರ್ಶಿ ಶ್ರೀಯುತ ಹರೀಶ್ ಬಂಗೇರರವರು ವಾರ್ಷಿಕ ವರದಿಯನ್ನು ವಾಚಿಸಿದರು. ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಯುತ ಶಂಕರನಾರಾಯಣ ಭಟ್ ರವರು ಸ್ವಾಗತಿಸಿ, ನಿರ್ದೇಶಕ ನೋಣಪ್ಪ ಎಂ.ಆರ್ ವಂದಿಸಿದರು. ನಿರ್ದೇಶಕರಾದ ಶ್ರೀ ಉಮೇಶ್ ಎನ್, ಶ್ರೀ ಜಗನ್ನಾಥ್ ಆಳ್ವ ಹಾಗೂ ಶ್ರೀ ಎ.ಡಿ ಹರಿಶಂಕರ್ ಭಟ್ ಹಾಗೂ ಸದಸ್ಯರು ಉಪಸ್ಥಿರಿದ್ದರು. ಕಾರ್ಯದರ್ಶಿ ಹರೀಶ್ ಬಂಗೇರರವರು ಕಾರ್ಯಕ್ರಮ ನಿರೂಪಿಸಿದರು