ಬಂಟ್ವಾಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ , ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ , ಸಮೂಹ ಸಂಪನ್ಮೂಲ ಕೇಂದ್ರ ತುಂಬೆ ಮಾರ್ಗದರ್ಶನದಲ್ಲಿ ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಶಾಲೆ ಮೆರಮಜಲು ಇವರ ಆತಿಥ್ಯದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ -೨೦೧೫ ಕಾರ್ಯಕ್ರಮವು ಹೋಲಿ ಫ್ಯಾಮಿಲಿ ಶಾಲೆಯ ಸಭಾಂಗಣದಲ್ಲಿ ನೆರವೇರಿತು , ಶಾಲಾ ಸಂಚಾಲಕರಾದ ರೆ\ ಫಾ \ ಜೇಮ್ಸ್ ಡಿ ಸೋಜ ದೀಪ ಬೆಳಗಿಸಿ ಚಾಲನೆ ನೀಡಿದರು ಮುಖ್ಯ ಅತಿಥಿಗಳಾಗಿ ಮೆರಮಜಲು ಗ್ರಾಮ ಪಂಚಾಯತ್ ಅದ್ಯಕ್ಷರಾದ ಶ್ರೀ ಸತೀಶ್ ನಾಯ್ಕ್ , ಶಾಲಾ ಶಿಕ್ಷಕ ರಕ್ಷಕ ಸಂಘದ ಅದ್ಯಕ್ಷರಾದ ಶ್ರೀ ದಿನೇಶ್ ಶೆಟ್ಟಿ , ತುಂಬೆ ಸಮೂಹ ಸಂಪನ್ಮೂಲ ವ್ಯಕ್ತಿ ಯಾಗಿರುವ ಶ್ರೀ ವೆಂಕಟ ರಾವ್ , ಶಾಲಾ ಮುಖ್ಯೋಪಾದ್ಯಯಿನಿ ಸಿಸ್ಟರ್ ಲೀನ , ಫಿಲೋಮಿನ ಮೊಂತೆರೋ , ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ಶ್ರೀ ಶೇಷಪ್ಪ ಮೂಲ್ಯ , ಕ್ಲಸ್ಟರ್ ಸಲಹಾ ಸಮಿತಿ ಅದ್ಯಕ್ಷ ಬಾಬು ಮುಗೇರ ವೇದಿಕೆ ಯಲ್ಲಿದ್ದರು , ೨೨ ವಿಭಾಗ ಗಳಲ್ಲಿ ಸ್ಪರ್ದೆ ನಡೆಯಲಿದೆ ಅರ್ಹ ತೀರ್ಪುಗಾರರಿಂದ ನ್ಯಾಯ ಒದಗಿಸಲಾಗುವುದು ವಿಶೇಷ ವಾಗಿ ಯಕ್ಷಗಾನ ಮತ್ತು ಅರೇಬಿಕ್ ಸ್ಪರ್ದೆ ಗಳಿಗೆ ಅರ್ಹ ಸಂಪನ್ಮೂಲ ವ್ಯಕ್ತಿ ಗಳನ್ನು ತೀರ್ಪು ಗಾರರಾಗಿ ಆಯ್ಕೆ ಮಾಡಲಾಗಿದೆ ಎಂದು ತುಂಬೆ ಸಮೂಹ ಸಂಪನ್ಮೂಲ ವ್ಯಕ್ತಿ ಯಾಗಿರುವ ಶ್ರೀ ವೆಂಕಟ ರಾವ್ ಮಾಹಿತಿ ನೀಡಿದರು.
