ಸಂಸ್ಕ್ರತಿ ಸಂಪ್ರದಾಯವನ್ನು ಉಳಿಸಬೇಕು, ಹರಿಕ್ರಷ್ಣ ಪುನರೂರು
ಕಿನ್ನಿಗೋಳಿ: ಸಜ್ಜನ ಬಂದುಗಳು ಕಿನ್ನಿಗೋಳಿ ವತಿಯಿಂದ ಆಷಾಡ ಅಮವಾಸೆಯ ಪ್ರಯುಕ್ತ ಹಾಳೆ ಮರ ತೊಗಟೆಯ ಕಷಾಯ ವಿತರಣಾ ಸಮಾರಂಭ ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ನಡೆಯಿತು ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜೀ ಅಧ್ಯಕ್ಷ ಹರಿಕ್ರಷ್ಣ ಪುನರೂರು ಸಾರ್ವಜನಿಕರಿಗೆ ಕಷಾಯ ಕೊಡುವ ಮೂಲಕ ಉದ್ಘಟನೆಯನ್ನು ನೆರವೇರಿಸಿದರು.

ನಂತರ ಮಾತನಾಡಿದ ಅವರು ತುಳುನಾಡಿನ ಅನೇಕ ಸಂಸ್ಕ್ರತಿ ಸಂಸ್ಕ್ರರಗಳು ಇಂದು ಮರೆಯಾಗುತ್ತಿದೆ, ಮೂಡನಂಬಿಕೆಯನ್ನು ದೂರ ಮಾಡಿ ಮೂಲ ನಂಬಿಕೆಗಳನ್ನು ಉಳಿಸಬೇಕು, ಅದಕ್ಕಾಗಿ ಇಂತಹ ಸಂಪ್ರದಾಯವನ್ನು ಮುಂದುವರಿಸಬೇಕು, ಇದನ್ನು ತಯಾರಿಸುವ ಅನಾನುಕೂಲವಿದ್ದವರಿಗೆ ಸಜ್ಜನ ಬಾಂಧವರು ಉಚಿತವಾಗಿ ಕಷಾಯ ವಿತರಿಸಿ ಒಂದು ಉತ್ತಮ ಕೆಲಸವನ್ನು ಮಾಡಿದ್ದಾರೆ, ಕಿನ್ನಿಗೋಳಿ ಸುತ್ತ ಮುತ್ತ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳು ಸಜ್ಜನ ಬಾಂಧವರು ವತಿಯಿಂದ ಮುಂದುವರಿಯಲಿ ಎಂದರು, ಈ ಸಂದರ್ಭ ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿಲೋಮಿನಾ ಸಿಕ್ವೇರ, ಉಪಾಧ್ಯಕ್ಷೆ ಸುಜಾತ ಮೆನ್ನ ಬೆಟ್ಟು ಪಂಚಾಯತ್ ಅಧ್ಯಕ್ಷೆ ಸರೋಜಿನಿ, ಕಿನ್ನಿಗೋಳಿ ಉದ್ಯಮಿ ಪ್ರಥ್ವಿ ರಾಜ್ ಆಚಾರ್ಯ, ಸಜ್ಜನ ಬಾಂಧವರು ಅಧ್ಯಕ್ಷ ರಘನಾಥ್ ಕಾಮತ್, ಸಂಚಾಲಕ ಜನಾರ್ಧನ್ ಕಿಲೆಂಜೂರು, ಸದಸ್ಸ್ಯರಾದ ದೇವದಾಸ ಮಲ್ಯ, ದಾಮೋಧರ ಶೆಟ್ಟಿ, ಕೇಶವ ಕರ್ಕೆರ, ಮಿಥುನ್ ಕೊಡೆತ್ತೂರು, ಜೊಸ್ಸಿ ಪಿಂಟೋ, ಹರಿಪ್ರಸಾದ್ ಆಚಾರ್ಯ, ಮತ್ತಿತರರು ಉಪಸ್ಥಿತರಿದ್ದರು ಪ್ರಕಾಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

