ಮಂಗಳೂರು: ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಕಾಣಿಯೂರು ಮಠ ಉಡುಪಿ ಇವರ ಆಶ್ರಯದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ), ದ,ಕ ಮತ್ತು ಉಡುಪಿ ಜಿಲ್ಲೆ ಇದರ ರಜತ ಸಂಭ್ರಮದ ಪ್ರಯುಕ್ತ ಲಯನ್ಸ್ ಕ್ಲಬ್ ಪರ್ಕಳ ಸಹಯೋಗದೊಂದಿಗೆ ಸಾರ್ವಜನಿಕರಿಗಾಗಿ ಶ್ರೀ ಕೃಷ್ಣಾಷ್ಟಮಿ ಅಂಗವಾಗಿ ರಾಜ್ಯಮಟ್ಟದ ಮುಕ್ತ ಸೆಮಿ ಕ್ಲಾಸಿಕಲ್ ರಾಧಾ ಕೃಷ್ಣ ನೃತ್ಯ ಸ್ಪರ್ಧೆ ಆಗಸ್ಟ್ 23. ಭಾನುವಾರದಂದು ಬೆಳಿಗ್ಗೆ ಗಂಟೆ 9ರಿಂದ ರಾಜಾಂಗಣದಲ್ಲಿ ನಡೆಯಲಿದೆ.
ಈ ನೃತ್ಯ ಸೆಮಿ ಕ್ಲಾಸಿಕಲ್ ಆಗಿದ್ದು ರಾಧೆ-ಕೃಷ್ಣ ಹೊರತು ಪಡಿಸಿ 8 ಮಂದಿ ಸ್ಪರ್ಧಾಳುಗಳು ಬಾಗವಹಿಸಲೇ ಬೇಕು. ಪ್ರತೀ ತಂಡಕ್ಕೆ ಗರಿಷ್ಠ 5 ನಿಮಿಷ ಕಾಲಾವಕಾಶ ಕೊಡಲಾಗುವುದು. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಸ್ಪರ್ಧಾಳುಗಳಿಗೆ ಊಟೋಪಚಾರದ ವ್ಯವಸ್ಥೆ ಇದೆ. ಪ್ರಥಮ ಬಹುಮಾನ ರುಪಾಯಿ 11,111=00, ದ್ವಿತೀಯ ರುಪಾಯಿ 5,555=00 ಹಾಗು ತೃತೀಯ ರುಪಾಯಿ 3,333=33 ಮತ್ತು ಆಕರ್ಷಕ ಸ್ಮರಣಿಕೆ ಇದೆ. ಆಸಕ್ತರು ಸಾಂಸ್ಕ್ರತಿಕ ಕಾರ್ಯದರ್ಶಿ ದತ್ತಾತ್ರೇಯ ಕಾರ್ಕಳ ದೂ: 9886437456 ಹಾಗು ದಯಾನಂದ ಬಂಟ್ವಾಳ ದೂ: 9449367039 ಇವರಲ್ಲಿ ತಮ್ಮ ಹೆಸರಗಳನ್ನು ಆಗಸ್ಟ್ 20, ಗುರುವಾರದೊಳಗೆ ನೊಂದಾಯಸ ಬೇಕು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಸ್ಮರಣಿಕೆ ನೀಡಲಾಗುವುದು ಎಂದು ಎಸ್.ಕೆ.ಪಿ.ಎ{ರಿ},ಮಂಗಳೂರು-ಉಡುಪಿ ಅಧ್ಯಕ್ಷ ಶ್ರೀ ಕೆ. ವಾಸುದೇವ ರಾವ್ ತಿಳಿಸಿರುತ್ತಾರೆ

By suddi9

Leave a Reply

Your email address will not be published. Required fields are marked *