ಕೈಕಂಬ: ಅಸುಪಾಸಿನ ಜನರಿಗೆ ಸಂತಸದ ವಿಷಯ ಜನರಿಗೆ ಅನುಕೂಲವಾಗುವಂತೆ ಮೂಡಬಿದ್ರೆ ಮಂಗಳೂರು ಮಾರ್ಗದ ಹೃದಯ ಭಾಗದಲ್ಲಿ ಗುರುಪುರ ಕೈಕಂಬದ ನಾರಾಯಣ ಕಾಂಪ್ಲೆಕ್ಸ್, ಕುಲವೂರು ಗ್ಯಾರೇಜ್‍ನ ಬಳಿ ಫಲ್ಗುಣಿ ಹೋಂಡವು (ಅಂಡರ್ ಮ್ಯಾಟ್ರಿಕ್ಸ್ ಗ್ರೂಫ್) ಅ.15 ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲಿ ಶುಭಾರಂಭಗೊಂಡಿತು.

ಇದರ ಉದ್ಘಾಟನೆಯನ್ನು ಎಡಪದವು ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಮುರಳೀದರ ಶೆಟ್ಟಿ ನೇರವೇರಿಸಿದರು. ಆಶೀರ್ವಚನವನ್ನು ಸ್ವಾಮಿ ವಿವೇಕಚೈತನ್ಯನಂದರ ಅನುಪಸ್ಥಿತಿಯಲ್ಲಿ ಪದ್ಮಪಾದನಾಂದ ಸ್ವಾಮಿ ಆರ್ಶಿವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಗಂಜಿಮಠ ಪಂಚಾಯತ್ ಉಪಾಧ್ಯಕ್ಷ ಝಾಕೀರ್ ಆರ್.ಎಸ್, ಮ್ಯಾಟ್ರಿಕ್ಸ್ ಗ್ರೂಫ್‍ನ ಪಿ .ಇ.ಓ ಮಹೇಂದ್ರಗಾಂಧಿ, ಮಾಟ್ರಿಕ್ಸ ಗ್ರೂಫ್ನ ಕಿರಣ್ ಶೆಟ್ಟಿ, ಗಣೇಶ ಕುಲವೂರು ಗ್ಯಾರೇಜ್‍ನ ಮಾಲಕ ವಿಶ್ವನಂದ ಮತ್ತಿತ್ತರರು ಉಪಸ್ಥಿತರಿದ್ದರು. ಪಲ್ಗುಣಿ ಹೋಂಡದ ಮಾಲಕ ಸಂತೋಷ್ ರವರು ಎಲ್ಲರನ್ನು ಸ್ವಾಗತಿಸಿ, ಶಿವರಾಮ್ ಕಾರ್ಯಕ್ರಮ ನಿರೂಪಿಸಿದರು.














