ಬುರೂಜ್ ಸ್ವಾತಂತ್ರೋತ್ಸವದಲ್ಲಿ ಶ್ರೀ ಅಮ್ಮು ಶೆಟ್ಟಿ ಬೆಂಜಂತಿಮಾರ್.
ಪುಂಜಾಲಕಟ್ಟೆ: ಹೇಗೆ ಚಿಕಾಗೊದಲ್ಲಿ ಎಲ್ಲಾ ದೇಶದವರ ಭಾಷಣ ಮುಗಿದು ಕಡೆಗೆ ಭಾಷಣಮಾಡಿದ ಸವಾಮಿ ವಿವೇಕಾನಂದರ ಮಾತನ್ನು ಕೇಳಿ ವಿಶ್ವ ನಿಬ್ಬೆರಗಾಯಿತೂ ಅಂತಹ ಮಾತನ್ನಾಡುವ ಚಾತುರ್ಯತೆ ತಾವು ಬೆಳೆಸಿ ಕೊಳ್ಳ ಬೇಕು ಎಂದು ಬೆಂಜಂತಿಮಾರಿನ ವಿಶ್ರಾಂತ ಮುಖ್ಯ ಶಿಕ್ಷಕ ಶ್ರೀ ಅಮ್ಮು ಶೆಟ್ಟಿ ಯವರು ಬುರೂಜ್ ಶಾಲಾ ಮಕ್ಕಳಿಗೆ ಸಂಭೋದಿಸಿದರು. ಅವರು ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ನ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ಗೈದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ರೀ ಪ್ರಕಾಶ್ ಶೆಟ್ಟಿ ಮಧ್ವ ವಹಿಸಿದರು. ನಿವೃತ್ತ ಯೋಧ ಶ್ರೀ ಲಕ್ಷ್ಮಣ ಪೂಜಾರಿ ಧ್ವಜವಂದನೆಗೈದರು. ಹತ್ತನೇ ತರಗತಿಯ ಮನೋಜ್ ಸ್ವಾಗತಿಸಿದರು, ಆದರ್ಶ್ ಕಾರ್ಯಕ್ರಮ ನಿರೂಪಿಸಿದರು. ರಿಯಾ, ಸಹನಾ ಶೇಕ್ ಮತ್ತು ಗ್ಲಾಡ್ವಿನ್ ಮಕ್ಕಳ ಕಾರ್ಯಕ್ರಮದ ನಿರೂಪಣೆಗೈದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಶೇಕ್ ರಹ್ಮತುಲ್ಲ, ಬದ್ರಿಯಾ ಮಸ್ಜಿದ್ನ ಅಧ್ಯಕ್ಷ ಜನಾಬ್ ಇದ್ದಿನಬ್ಬ ಪಿ.ಕೆ, ನರ್ವಲ್ದಡ್ಡ ಸುಂದರ ಶೆಟ್ಟಿ, ಶ್ರೀ ಧನಂಜಯ ಕುಮಾರ್ ಜೈನ್, ಶಾಲಾ ಮುಖ್ಯ ಶಿಕ್ಷಕ ಶ್ರೀ ಲೋಕಯ್ಯ ಶಿಶಿಲ ಮತ್ತು ಶಾಲಾ ಶಿಕ್ಷಕ-ಶಿಕ್ಷಕಿಯರು ಉಪಸ್ತಿಥ ರಿದ್ದರು. ಮಕ್ಕಳಿಂದ ದೇಶ ಭಕ್ತಿಗೀತೆ, ಕವಾಯತು, ಭಾಷಣ ಕಾರ್ಯಕ್ರಮ ನಡೆಯಿತು.