ಬಂಟ್ವಾಳ: ದ ಕ ಜಿ ಪಂ ಮಾ ಹಿ ಪ್ರಾ ಶಾಲೆ ಮತ್ತು ಆರ್ ಕೆ ಆಟ್ರ್ಸ್‍ನ ದಶಮಾನೋತ್ಸವದ ಪ್ರಯುಕ್ತ ಜಂಟಿಯಾಗಿ 69 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ನಿವೃತ್ತ ಸೇನಾನಿ ಎಡ್ವಿನ್ ರೋಡ್ರಿಗಸ್ ಧ್ವಜಾರೋಹಣ ಮಾಡಿದರು.
rkಈ ಸಂದರ್ಭದಲ್ಲಿ ನಡೆದ ಪಥಸಂಚಲನದಲ್ಲಿ ಸ್ವಾತಂತ್ರ್ಯ ಪೂರ್ವವನ್ನು ನೆನಪಿಸುವ ದಂಡಿ ಸತ್ಯಾಗ್ರಹ, ಭಾರತ ಮಾತೆ, ಸರ್ವ ಧರ್ಮವನ್ನು ಸಾರುವ, ಎ ಪಿ ಜೆ ಅಬ್ದುಲ್ ಕಲಾಂ ಗೆ ಸೈನಿಕರಿಂದ ನಮನ ಇವುಗಳ ಸ್ಥಬ್ದ ಚಿತ್ರ, ಶಾಲಾ ಬ್ಯಾಂಡ್ ಸೆಟ್, ಕೋಲಾಟ, ಪಟ್ಟೆ ಕುಣಿತ, ಮರದ ಕಾಲಿನ ನಡಿಗೆ, ಸ್ಕೌಟ್ಸ್, ಗೈಡ್ಸ್, ಸೇವಾದಳ, ತಂಡಗಳು ಮತ್ತು ವಿವಿಧ ವೇಷ ಭೂಷಣಗಳಿಂದ ಘೋಷಣೆಯೊಂದಿಗೆ ವಿಟ್ಲ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಗೌರವಾಧ್ಯಕ್ಷ ಸುಬ್ರಾಯ ಪೈ, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು, ಆರ್ ಕೆ ಆಟ್ರ್ಸ್‍ನ ರಾಜೇಶ್ ವಿಟ್ಲ ಮತ್ತು ವಿಟ್ಲ ಅರಮನೆಯ ಕೃಷ್ಣಯ್ಯ ಕೆ,ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ್ ಕುಮಾರ್ ಮತ್ತು ಸದಸ್ಯರು, ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *