‘ನಾಟಕ ಪ್ರದರ್ಶನ ಒಂದು ಸಾಹಸ’: ಕಿಶೋರ್ ಡಿ. ಶೆಟ್ಟಿ
ಬಂಟ್ವಾಳ: ತುಳುನಾಡಿನಲ್ಲಿ ಯಕ್ಷಗಾನದ ಜೊತೆಗೆ ತುಳು ನಾಟಕ ರಂಗ ಕೂಡಾ ವಿಸ್ತಾರವಾಗಿ ಬೆಳೆದು ಬಂದಿದ್ದು, ಪ್ರಸಕ್ತ ಸಾಹಸಮಯ ರೀತಿಯಲ್ಲಿ ಮುನ್ನಡೆಯುತ್ತಿರುವ ನಾಟಕ ರಂಗಕ್ಕೆ ಅಪಾರ ಮಂದಿ ಯುವ ಕಲಾವಿದರನ್ನು ಆಕರ್ಷಿಸುತ್ತಿದೆ. ಈಗಾಗಲೇ ಸಾಕಷ್ಟು ನಾಟಕ ಮತ್ತಿತರ ಕಲಾ ತಂಡಗಳು ಕಣ್ಮರೆಯಾಗಿದ್ದರೂ ಬಂಟ್ವಾಳದಲ್ಲಿ ನಾಟಕೋತ್ಸವ ಸ್ಪರ್ಧೆ ಮೂಲಕ ಹೊಸ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವ ಸಂಘಟಕರ ಪ್ರಯತ್ನ ಶ್ಲಾಘನೀಯ ಎಂದು ಕುಡ್ಲ ಲಕುಮಿ ನಾಟಕ ತಂಡದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಹೇಳಿದ್ದಾರೆ.
16btl-natakaಬಂಟ್ವಾಳ ವಿಎನ್‍ಆರ್ ಗೋಲ್ಡ್ ಸಂಸ್ಥೆ ಬಳಿ ಇಲ್ಲಿನ ಮೋಕೆದ ಕಲಾವಿದೆರ್ ಮತ್ತು ತುಳು ನಾಟಕೋತ್ಸವ ಸಮಿತಿ ವತಿಯಿಂದ ಭಾನುವಾರ ರಾತ್ರಿ ಆರಂಭಗೊಂಡ ಎಂಟು ದಿನಗಳ ‘ತುಳು ನಾಟಕೋತ್ಸವ ಸ್ಪರ್ಧೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಿತಿ ಗೌರವಾಧ್ಯಕ್ಷ ಸುದರ್ಶನ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿ ಕಲಾವಿದರನ್ನು ಪ್ರೋತ್ಸಾಹಿಸುವ ಜೊತೆಗೆ ಆರೋಗ್ಯ ಮೇಳವನ್ನೂ ಆಯೋಜಿಸಲಾಗಿದೆ ಎಂದರು. ಬಿ.ಸಿ.ರೋಡ್ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ.ಕೆ.ತುಕರಾಮ ಪೂಜಾರಿ ಅವರು ರಾಣಿ ಅಬ್ಬಕ್ಕ ಕಲಾ ಮಂಟಪ ಉದ್ಘಾಟಿಸಿದರು. ಚಿತ್ರನಟ ಅರ್ಜುನ್ ಕಾಪಿಕಾಡ್ ಅವರು ಆರಂಭದಲ್ಲಿ ನಡೆದ ಆಕರ್ಷಕ ‘ತುಳು ಜಾನಪದ ದಿಬ್ಬಣ’ಕ್ಕೆ ಚಾಲನೆ ನೀಡಿದರು. ಇದೇ ವೇಳೆ 30ಕ್ಕೂ ಮಿಕ್ಕಿ ತುಳು ನಾಟಕ ರಚಿಸಿದ ಹಿರಿಯ ನಾಟಕ ಕಲಾವಿದ ಬಿ. ಆರ್. ಕುಲಾಲ್ ಇವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬಂಟ್ವಾಳ ಬುಡಾ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್, ತಾ.ಪಂ.ಅಧ್ಯಕ್ಷ ಯಶವಂತ ಡಿ., ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್, ಕಲಾವಿದ ಮೋಹನ ಕೊಪ್ಪಲ ಕದ್ರಿ, ಸಮಿತಿ ಗೌರವಾಧ್ಯಕ್ಷ ನಾಗೇಂದ್ರ ವಿ.ಬಾಳಿಗ ಇವರು ತುಳು ನಾಟಕವು ಪರಸ್ಪರ ಸೌಹಾರ್ದತೆ ಬೆಸೆಯುತ್ತದೆ ಎಂದು ಶುಭ ಹಾರೈಸಿದರು.
ನಾಟಕೋತ್ಸವ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಬಂಟ್ವಾಳ ಸ್ವಾಗತಿಸಿ, ಸಂಚಾಲಕ ಮೋಹನದಾಸ ಕೊಟ್ಟಾರಿ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ರಾಜೇಶ್ ಕೊಟ್ಟಾರಿ ವಂದಿಸಿದರು. ಕಲಾವಿದ ಎಚ್ಕೆ ನಯನಾಡು ಮತ್ತು ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *