ಬಂಟ್ವಾಳ : ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೂರ್ಣಾವ„ ವೈದ್ಯರ ನೇಮಕ ಮೊದಲಾದ ಬೇಡಿಕೆಗಳ ಬಗ್ಗೆ ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಸಾರ್ವಜನಿಕರು ಹಾಗೂ ಇತರ ಸಂಘಟನೆಗಳ ವತಿಯಿಂದ ಸೋಮವಾರ ಪ್ರಾ.ಆ.ಕೇಂದ್ರದ ಮುಂಭಾಗದಲ್ಲಿ ಪ್ರತಿಭಟನಾ ಸಭೆ ಜರಗಿತು.
ಬಿಜೆಪಿ ಪ್ರಮುಖ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರು ಸಭೆಯಲ್ಲಿ ಭಾಗವಹಿಸಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ ಜನರಿಗೆ ಆರೋಗ್ಯ ಭಾಗ್ಯ ಎಂಬುವುದು ದೊಡ್ಡ ಭಾಗ್ಯ. ಇದನ್ನು ದೊರಕಿಸಿಕೊಡುವಲ್ಲಿ ರಾಜ್ಯ ಆರೋಗ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಬೇಕು. ಆರೋಗ್ಯ ಕೇಂದ್ರದ ಸಮಸ್ಯೆಗಳನ್ನು ಮೂರು ತಿಂಗಳೊಳಗೆ ಪರಿಹರಿಸದಿದ್ದಲ್ಲಿ ಪಾದಯಾತ್ರೆ ಮೂಲಕ ಬೆಂಗಳೂರಿಗೆ ಹೋಗಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
1708pkt2A

1708pkt2
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಮಾತನಾಡಿ ಆರೋಗ್ಯ ಕೇಂದ್ರದಲ್ಲಿ 2 ವರ್ಷಗಳ ಹಿಂದೆ ಪೂರ್ಣ ಪ್ರಮಾಣದ ವೈದ್ಯಾ„ಕಾರಿ ಕಾರ್ಯನಿರ್ವಹಿಸುತ್ತಿದ್ದು ಪ್ರಕೃತ ಒಬ್ಬರೇ ವೈದ್ಯಾ„ಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ದಿನಕ್ಕೆ ಸುಮಾರು 300ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದು , ಸದ್ರಿ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ . ಅಲ್ಲದೆ ಈ ಹಿಂದೆ ದಿನದ 24 ಗಂಟೆಯೂ ಹೆರಿಗೆಯ ವ್ಯವಸ್ಥೆ ಇತ್ತು . ಆದರೆ ಅದು ಕೂಡಾ ಈಗ ರದ್ದಾಗಿರುತ್ತದೆ. ಇಬ್ಬರು ಪೂರ್ಣ ಪ್ರಮಾಣದ ವೈದ್ಯಾ„ಕಾರಿಗಳು ಹಾಗೂ ಸಿಬಂದಿಗಳನ್ನು ನೇಮಕಗೊಳಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು. ತಪ್ಪಿದಲ್ಲಿ ಉಗ್ರ ರೀತಿಯ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಆರೋಗ್ಯಾ„ಕಾರಿ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸುವಂತೆ ಪ್ರತಿಭಟನಾಕಾರರು ಈ ವೇಳೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ರಸ್ತೆ ತಡೆ ನಡೆಸಿದರು. ತಾಲೂಕು ಆರೋಗ್ಯಾ„ಕಾರಿ ಡಾ| ಮಂಜುನಾಥ್ ಅವರು ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದರೂ ಪಟ್ಟು ಬಿಡದ ಪ್ರತಿಭಟನಾಕಾರರು ರಾತ್ರಿಯಾದರೂ ಪ್ರತಿಭಟನೆ ಕೈಬಿಡಲಾಗುವುದಿಲ್ಲ ಎಂದು ಪಟ್ಟುಹಿಡಿದರು. ಈ ವೇಳೆ ಸಾರ್ವಜನಿಕರಿಗೆ ತೊಂದರೆಯಾಗುವುದರಿಂದ ರಾಜೇಶ್ ನಾೈಕ್ ಅವರ ವಿನಂತಿ ಮೇರೆಗೆ ರಸ್ತೆ ತಡೆಯನ್ನು ಪ್ರತಿಭಟನಾಕಾರರು ಹಿಂತೆಗೆದರು. ಬಳಿಕ ಜಿಲ್ಲಾ ಆರೋಗ್ಯಾ„ಕಾರಿ ಡಾ|ರಾಮಕೃಷ್ಣ ರಾವ್ ಅವರು ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನೆ ಕೊನೆಗೊಳಿಸಲಾಯಿತು.
ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ , ಉಪಾಧ್ಯಕ್ಷೆ ಲಕ್ಷ್ಮಿ ಜೆ.ಬಂಗೇರ, ಇರ್ವತ್ತೂರು ಗ್ರಾ.ಪಂ.ಅಧ್ಯಕ್ಷೆ ಸುಜಾತ, ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್,ಡಾ|ಅಂಬೇಡ್ಕರ್ ಪ್ರತಿಷ್ಠಾನ ಜಿಲ್ಲಾಧ್ಯಕ್ಷ ಸಾಲು, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ ಶೆಟ್ಟಿ , ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಎಂ., ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ., ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಕಿರಣ್ ಮೂರ್ಜೆ, ನಯನಾಡು ಹಾ.ಉ.ಸಂಘದ ಅಧ್ಯಕ್ಷ ಪ್ರಕಾಶ್ ರಾವ್, ಚೆನ್ನೈತ್ತೋಡಿ ಗ್ರಾ.ಪಂ. ಸದಸ್ಯ ಜಯರಾಮ ಶೆಟ್ಟಿ ಕಾಪು ಮತ್ತು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪಿಲಾತಬೆಟ್ಟು ಮತ್ತು ಇರ್ವತ್ತೂರು ಗ್ರಾ.ಪಂ.ಸದಸ್ಯರು, ಸ್ವಸ್ತಿಕ್ ಫ್ರೆಂಡ್ಸ್‍ಕ್ಲಬ್ ಪುಂಜಾಲಕಟ್ಟೆ , ತುಳುನಾಡ ರಕ್ಷಣಾವೇದಿಕೆ ಪುಂಜಾಲಕಟ್ಟೆ ಘಟಕ, ಹಿಂದೂ ಜಾಗರಣಾ ವೇದಿಕೆ ಮೂರ್ಜೆ-ನಯನಾಡು – ಎಡ್ತೂರು , ಡಾ|ಬಿ.ಆರ್.ಅಂಬೇಡ್ಕರ್ ಪ್ರತಿಷ್ಠಾನ, ಶ್ರೀ ರಾಮಾಂಜನೇಯ ಭಜನ ಮಂಡಳಿ ಶ್ರೀರಾಮ ನಗರ, ಯಂಗ್ ಫ್ರೆಂಡ್ಸ್ ಎರ್ಮೆನಾಡು, ಯಕ್ಷಗಾನ ಸಮಿತಿ ಪೆಲತ್ತಕಟ್ಟೆ , ಶಿವಾಜಿ ಸ್ಪೋಟ್ರ್ಸ್‍ಕ್ಲಬ್ ಪೆಲತ್ತಕಟ್ಟೆ , ಸಾಮೂಹಿಕ ಶನೈಶ್ವರ ಪೂಜಾ ಸಮಿತಿ ಮೂರ್ಜೆ, ಸಾರಥಿ ಕಲಾವಿದರು ಮಡಂತ್ಯಾರು, ಅಟೋರಿಕ್ಷಾ ಚಾಲಕ ಮಾಲಕರ ಸಂಘ ಪುಂಜಾಲಕಟ್ಟೆ , ಜ್ಯೋತಿ ಯುವತಿ ಮಂಡಲ ವಾಮದಪದವು ಮೊದಲಾದ ಸಂಘ ಸಂಸ್ಥೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
ಬಾಕ್ಸ್
ರೋಗಿಗಳ ಸಂಖ್ಯೆ ಹೆಚ್ಚಿರುವ ಪ್ರಕಾರ ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರ ಮೇಲ್ದರ್ಜೆಗೇರಬೇಕಾಗಿದೆ. ಈ ನಿಟ್ಟಿನಲ್ಲಿ ತಿಂಗಳ ಹಿಂದೆಯೇ ಆರೋಗ್ಯ ಇಲಾಖೆಗೆ ಸ್ಪಷ್ಟೀಕರಣ ಪತ್ರ ನೀಡಲಾಗಿದೆ. ಪ್ರಾ.ಆ.ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಿದಲ್ಲಿ ಹೆಚ್ಚುವರಿ ವೈದ್ಯರು, ಸಿಬಂದಿಗಳು, 30 ಹಾಸಿಗೆಯ ಸವಲತ್ತುಗಳು ದೊರೆಯುತ್ತವೆ. ಈ ಬಗ್ಗೆ ಮೇಲ„ಕಾರಿಗಳ ಮೂಲಕ ಸರಕಾರದ ಗಮನಕ್ಕೆ ತರಲಾಗುವುದು.

By suddi9

Leave a Reply

Your email address will not be published. Required fields are marked *