ಬಂಟ್ವಾಳ: ಕಾಡುಮಠದಲ್ಲಿ ನೂತನವಾಗಿ ನಿರ್ಮಾಣಗೊಂಡ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಬೈರ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯು ಆ.16 ಭಾನುವಾರ ಸಂಘದ ಅಧ್ಯಕ್ಷ ಕೆ.ತಮ್ಮಣ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಂಬರುವ ಅಕ್ಟೋಬರ್ 4 ರಂದು ಸಂಘದ ವಾರ್ಷಿಕೋತ್ಸವ ನಡೆಸುವುದು ಸಮಾಜ ಬಾಂಧವರಿಗೆ ಆಟೋಟ ಸ್ಪರ್ಧೆ ಏರ್ಪಡಿಸುವುದು, ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದು ಮೊದಲಾದ ವಿಚಾರಗಳ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಆನಂದ ಸಾಲೆತ್ತೂರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನಿಕಟ ಪೂರ್ವ ಸದಸ್ಯ ಕೆ.ಗೋಪಾಲ ಕಾಡುಮಠ, ಹಿರಿಯರಾದ ತನಿಯಪ್ಪ ಕಾಡುಮಠ, ಕಿರುತೆರೆ ನಿರ್ದೇಶಕ ಕೊರಗಪ್ಪ ಶಿಂಗಾರಕೋಡಿ, ಅಲ್ಲದೇ ಸಮಾಜದ ಹಿರಿಯ ಕಿರಿಯ ಬಾಂಧವರು ಪಾಲ್ಗೊಂಡಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ.ಜಯರಾಮ ಕಾಡುಮಠ ಸ್ವಾಗತಿಸಿ ವಂದಿಸಿದರು.