ಬಂಟ್ವಾಳ : ತಾಲೂಕು ತೆಂಕಕಜೆಕಾರು ಮತ್ತು ಪುಂಜಾಲಕಟ್ಟೆ ಅಂಚೆ ಇಲಾಖೆ ಸಿಬಂದಿ ವರ್ಗ, ತೆಂಕಕಜೆಕಾರು ನವೋದಯ ಯುವಕ ಮಂಡಲ, ಶಾಲಾಭಿವೃದ್ಧಿ ಸಮಿತಿ ವತಿಯಿಂದ ಅಂಚೆ ಇಲಾಖೆಯಲ್ಲಿ ಸುಮಾರು 38 ವರ್ಷ ಸೇವೆ ಸಲ್ಲಿಸಿದ ಕಾಂತಪ್ಪ ಭಂಡಾರಿ ಅವರಿಗೆ ಬೀಳ್ಕೊಡುಗೆ ಹಾಗೂ ಸಮ್ಮಾನ ಕಾರ್ಯಕ್ರಮ ಕಿ.ಪ್ರಾ.ಶಾಲೆಯಲ್ಲಿ ಜರಗಿತು.

ಗ್ರಾ.ಪಂ.ಅಧ್ಯಕ್ಷ ವಜ್ರ ಪೂಜಾರಿ, ಉಪಾಧ್ಯಕ್ಷೆ ಮೋಹಿನಿ, ಗ್ರಾ.ಪಂ.ಸದಸ್ಯರಾದ ಗಂಗಾಧರ್ ಕಜೆಕಾರು, ಸುರೇಶ್ ಬಾರ್ದೊಟ್ಟು , ಪುಂಜಾಲಕಟ್ಟೆ ಪೋಸ್ಟ್ ಮಾಸ್ಟರ್ ಲೀನಾ ಕ್ರಾಸ್ತಾ, ಜೇನು ಮತ್ತು ರಬ್ಬರ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾ„ಕಾರಿ ಗುಣಶೇಖರ ಕೊಡಂಗೆ, ಜುಮ್ಮಾ ಮಸೀದಿಯ ಅಧ್ಯಕ್ಷ ಸುಲೈಮಾನ್ ಮದನಿ, ನವೋದಯ ಯುವಕ ಮಂಡಲದ ದಿವಾಕರ್ ಕರ್ಲ, ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿ„ ಸುಧಾ ಎಚ್.ರೈ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಬಾಬು, ಸಮಿತಿ ಸದಸ್ಯರು, ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಶಿಕ್ಷಕಿ ಸವಿತಾ ಅವರು ಸ್ವಾಗತಿಸಿದರು. ಮುಖ್ಯಶಿಕ್ಷಕಿ ಸುಭದ್ರಮ್ಮ ವಂದಿಸಿದರು. ಪ್ರಕಾಶ್ ಕರ್ಲ ಕಾರ್ಯಕ್ರಮ ನಿರೂಪಿಸಿದರು.