ಬಂಟ್ವಾಳ : ತಾಲೂಕು ಅರಳ ಬಂಟರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಮ್ಮಾನ ಕಾರ್ಯಕ್ರಮ ಅರಳ ಬಾರ್ಲಗುತ್ತು ಮನೆಯಲ್ಲಿ ಜರಗಿತು

2108pkt6ಸ್ಥಳೀಯ ಪ್ರಮುಖ ಸುಬ್ಬಯ್ಯ ಶೆಟ್ಟಿ ಬಾರ್ಲಗುತ್ತು ಅವರು ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಬಂಟರ ಸಂಘದ ಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ ರಂಗೋಲಿ ಅವರು ಮುಖ್ಯಅತಿಥಿಯಾಗಿ ಮಾತನಾಡಿ ಅರಳ ಬಂಟರ ಸಂಘವು ಬಂಟ್ವಾಳ ತಾಲೂಕಿನಲ್ಲಿ ಮಾದರಿಯಾಗಿ ತನ್ನ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುತ್ತದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ. ಬಂಟ್ವಾಳ ಬಂಟರ ಸಂಘದ ಸಭಾ ಭವನ ನಿರ್ಮಾಣಕ್ಕೆ ನೀಡುತ್ತಿರುವ ಸಹಕಾರಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರಳ ಬಂಟರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಸನತ್ ಕುಮಾರ್ ಅರಸ ಅವರು ಸಭಾಭವನ ನಿರ್ಮಾಣಕ್ಕೆ ಧನ ಸಹಾಯದ ಚೆಕ್ ವಿತರಿಸಿ ಮಾತನಾಡಿ ಅರಳ ಗ್ರಾಮದ ಸ್ವಜಾತಿ ಬಾಂಧವರಿಂದ ಕನಿಷ್ಠ 10 ಲಕ್ಷ ರೂ. ಸಂಗ್ರಹಿಸಿ ನೀಡಲಾಗುವುದು ಎಂದು ಹೇಳಿದರು. ಬಂಟ್ವಾಳ ಬಂಟರ ಸಂಘದ ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ರೈ ಬಾಲಾಜಿಬÉೈಲು, ಹಿರಿಯ ಪ್ರಗತಿಪರ ಕೃಷಿಕ ದಿವಾಕರ ಶೆಟ್ಟಿ ಸಂಗಬೆಟ್ಟುಗುತ್ತು , ಅರಳ ಗ್ರಾ.ಪಂ.ಉಪಾಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ, ಸದಸ್ಯರಾದ ಲಕ್ಷ್ಮೀಧರ ಶೆಟ್ಟಿ ಮದ್ಯಾಳ, ಕು|ವಿನುತಾ ಆಳ್ವ ಉಪಸ್ಥಿತರಿದ್ದರು.
ಇದೇ ವೇಳೆ ಇಬ್ಬರು ಚುನಾಯಿತ ಪ್ರತಿ„ಗಳು ಮತ್ತು 4 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.
ಸಂಘದ ಕಾರ್ಯದರ್ಶಿ ದಿವಾಕರ ರೈ ಅವರು ಸ್ವಾಗತಿಸಿದರು. ಕೋಶಾ„ಕಾರಿ ಹರೀಶ್ ಶೆಟ್ಟಿ ಹೊಸಬೆಟ್ಟು ವಂದಿಸಿದರು. ಸದಸ್ಯರಾದ ಅಶ್ವಿತಾ ಮಣೈ, ಶಾರಿಕಾ ಪಿ.ಶೆಟ್ಟಿ ಸಂಗಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *