ಬಂಟ್ವಾಳ:  ದ ಕ ಜಿಲ್ಲಾ ದಲಿತ್ ಸೇವಾ ಸಮಿತಿಯ 2015-16 ನೇ ಸಾಲಿನ ನೂತನ ಪದಾಧಧಿಕಾರಿಗಳ ಆಯ್ಕೆ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಹಾಗೂ ಕಾರ್ಯದರ್ಶಿ ಚಂದ್ರಶೇಖರ ಇವರ ನೇತೃತ್ವದಲ್ಲಿ ವಿಟ್ಲ ಮಾದರಿ ಶಾಲೆಯ ಸಭಾಭವದನಲ್ಲಿ ನಡೆದ ಸಮಾರಂಭದಲ್ಲಿ ನಡೆಯಿತು. ಜಿಲ್ಲಾದ್ಯಕ್ಷರಾಗಿ 9 ನೇ ಬಾರಿಗೆ ಬಿ ಕೆ ಸೇಸಪ್ಪ ಬೆದ್ರಕಾಡು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Sesappa b k bedrakadu

ಸುಮತಿ ಕುಳಾಲು,ಬಿ ಕೆ ಸೇಸಪ್ಪ ಬೆದ್ರಕಾಡು sumathi kulalu

 

ಸುಮತಿ ಕುಳಾಲು

ಗೌರವಾಧ್ಯಕ್ಷ ಆನಂದ ನಾಯ್ಕ ಅಪ್ಪೇರಿಪಾದೆ, ಉಪಾಧ್ಯಕ್ಷೆ ಸುಮತಿ ಕುಳಾಲು, ಸಂಚಾಲಕ ವಾಸಪ್ಪ ಬೈರ ಕಾಡುಮಠ, ಕಾರ್ಯದರ್ಶಿ ಚಂದ್ರಶೇಖರ ಯು ವಿಟ್ಲ, ಜತೆ ಕಾರ್ಯದರ್ಶಿ ಜಯಶ್ರೀ ನೆಲ್ಲಿಗುಡ್ಡೆ, ಕೋಶಾಧಿಕಾರಿ ಉಮೇಶ್ ಸುರುಳಿಮೂಲೆ, ಗೌರವ ಸಲಹೆಗಾರರಾಗಿ ಸೋಮಪ್ಪ ಸುರುಳಿಮೂಲೆ, ಸದಾಶಿವ ಕೇಪು, ಮೋನಪ್ಪ ಪುಣಚ, ಅಣ್ಣು ನಾಯ್ಕ ನೆತ್ರಕೆರೆ, ಶ್ರೀಧರ ಕಾಡುಮಠ, ಶಂಕರ ಕೊಲ್ಲಪದವು, ಲಲಿತ ಕುಂಡಕೋಳಿ, ಸೀತು ಕಲ್ಲಮಜಲು ಹಾಗೂ ಪ್ರತಿ ಗ್ರಾಮ ಸಮಿತಿಯಲ್ಲಿ ಒಟ್ಟು 43 ಜನರನ್ನು ಸಂಘಟನಾ ಕಾರ್ಯದರ್ಶಿಗಳಾಗಿ ಆಯ್ಕೆ ಮಾಡಲಾಯಿತು.
ಬಿ ಕೆ ಪ್ರಸಾದ್ ಅನಂತಾಡಿ ಪ್ರಾರ್ಥಿಸಿದರು. ಪವಿತ್ರ ಎಂ ಸ್ವಾಗತಿಸಿದರು. ದಿವ್ಯಾ ಕಲ್ಲಜೇರ ವಂದಿಸಿದರು. ಕಾರ್ಯದರ್ಶಿ ಚಂದ್ರಶೇಖರ ಕಾರ್ಯಕ್ರಮ ನಿರ್ವಹಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

By suddi9

Leave a Reply

Your email address will not be published. Required fields are marked *