ಮೂಡುಬಿದರೆ-ಕಾರ್ಕಳ ಹೆದ್ದಾರಿಯ ಬನ್ನಡ್ಕದಲ್ಲಿ ಹಾಕಿದ ಬ್ಯಾರಿಕೇಡ್ ಅಪಾಯಕಾರಿಯಾಗಿದ್ದು, ಅದನ್ನು ಅಲ್ಲಿಂದ ತೆರವುಗೊಳಿಸಿ, ಕಾಂತಾವರ ಕ್ರಾಸ್‍ನಲ್ಲಿ ಅಳವಡಿಸಬೇಕು. ವಾಹನಗಳನ್ನು ಸಮರ್ಪಕ ರೀತಿಯಲ್ಲಿ ತಪಾಸಣೆ ನಡೆಸಲು ಬೆಳುವಾಯಿಯಲ್ಲಿ ಚೆಕ್‍ಪೋಸ್ಟ್ ಅಗತ್ಯವಿದೆ.
ಗ್ರಾಮದ ಒಳರಸ್ತೆಗಳ ದುರಸ್ತಿಯಾಗಬೇಕು. ಬೆಳುವಾಯಿ ಪೇಟೆಯಲ್ಲಿ ಕೊಳಚೆ ನೀರು, ಪೇಟೆಯಲ್ಲಿರುವ ಶೌಚಾಲಯ ಅಶುಚಿತ್ವದ ಕುರಿತು ಚರ್ಚೆಯಾಯಿತು. ಕುಕ್ಕಡೇಲು ಅಂಗನವಾಡಿಯಲ್ಲಿ ಪೂರ್ಣಾವಧಿ ಶಿಕ್ಷಕಿಯನ್ನು ನೇಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಇಲಾಖೆಯು ಶೀಘ್ರ ಕ್ರಮ ಕೈಗೊಳ್ಳುತ್ತದೆ.
ಕೆಸರುಗದ್ದೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಾಲುಸಂಕ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾದರೂ ಪಂಚಾಯಿತಿ ಎಚ್ಚರಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಮಾಜಿ ಅಧ್ಯಕ್ಷ ರಾಘು ಪೂಜಾರಿ ಇದಕ್ಕೆ ಉತ್ತರಿಸಿ, ಸಚಿವರಲ್ಲಿ ಅನುದಾನದ ಬಗ್ಗೆ ಮಾತನಾಡಿದ್ದೇವೆ. ಭಾಸ್ಕರ ಆಚಾರ್ಯ ಉತ್ತರಿಸಿ, ಇದಕ್ಕೆ ಅನುದಾನ ಮೀಸಲಿರಿಸುತ್ತೇವೆ. ಜಿ.ಪಂ ಹಾಗೂ ತಾ.ಪಂ.ಗಳಿಂದಲೂ ಅನುದಾನ ಒದಗಿಸುವಂತೆ ಸದಸ್ಯರಲ್ಲಿ ಮನವಿ ಮಾಡಿದರು.
ಬೆಳುವಾಯಿಗೆ ಮೆಸ್ಕಾಂ ಲೈನ್‍ಮ್ಯಾನ್‍ಗಳ ಅವಶ್ಯಕತೆಯಿದೆ. ವಿಸ್ತಾರವಾಗ ಗ್ರಾ.ಪಂ ಆಗಿರುವುದರಿಂದ ಇಲ್ಲಿ ಮೆಸ್ಕಾಂನ ಪ್ರತ್ಯೇಕ ವಾಹನ ಕಾರ್ಯಾಚರಿಸಲಿ ಎಂದು ಗ್ರಾಮಸ್ಥರು ವಿನಂತಿಸಿದರು.
ಜಿ.ಪಂ ಸದಸ್ಯೆ ಅಂಬಿಕಾ ಡಿ. ಶೆಟ್ಟಿ, ಬೆಳುವಾಯಿ ಉಪಾಧ್ಯಕ್ಷೆ ರಮಣಿ ಆಳ್ವ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *