ಮೂಡುಬಿದಿರೆ : ರಾಜ್ಯದಲ್ಲಿ ನೂತನವಾಗಿ ಹಲವು ಗ್ರಾಮ ಪಂಚಾಯತ್ಗಳು ರಚನೆಗೊಂಡಿವೆ. ಆದರೆ ಗ್ರಾಮ ಪಂಚಾಯತ್ಗೆ ಸರಿಯಾದ ಕಟ್ಟಡಗಳು ಇಲ್ಲ. ಸರಕಾರದಿಂದ ಯಾವುದೇ ಸೌಲಭ್ಯಗಳು ಪಂಚಾಯತನ್ನು ತಲುಪಿಲ್ಲ. ಇದಲ್ಲದೆ ಇರುವೈಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಜಾಗವೆಲ್ಲವೂ ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಲಾಗಿದ್ದು ಪಂಚಾಯತ್ ಕಟ್ಟಡ ಮತ್ತು ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಸರಕಾರಿ ಜಾಗ ಇಲ್ಲದಂತ್ತಾಗಿದೆ ಎಂದು ಗ್ರಾಮಸ್ಥರು ಗ್ರಾಮಸಭೆಯಲ್ಲಿ ಆರೋಪಿಸಿದ್ದಾರೆ.
AKR_3788

AKR_3794

AKR_3802

AKR_3804

AKR_3812
ನೂತನ ಗ್ರಾಮ ಪಂಚಾಯತ್ ಇರುವೈಲ್ ಇದರ ಅಧ್ಯಕ್ಷೆ ನವೀನಾ ಅವರ ಅಧ್ಯಕ್ಷತೆಯಲ್ಲಿ ಸರಕಾರಿ ಪ್ರೌಢಶಾಲೆ ಹೊಸಬೆಟ್ಟು ಇದರ ಸಭಾಭವನದಲ್ಲಿ ಬುಧವಾರ ನಡೆದ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಈ ಬಗ್ಗೆ ಗ್ರಾಮಸ್ಥರಿಂದ ಚರ್ಚೆ ನಡೆಯಿತು. ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ನೀಡಲೂ ಜಾಗವಿಲ್ಲ, ಇದೀಗ ಇರುವೈಲ್ ವ್ಯಾಪ್ತಿಯವರು ತೆರಿಗೆಯನ್ನೆಲ್ಲಾ ಹೊಸಬೆಟ್ಟು ಪಂಚಾಯತ್ಗೆನೇ ಪಾವತಿಸಬೇಕು. ಯಾವ ಉದ್ದೇಶಕ್ಕಾಗಿ ನೂತನ ಪಂಚಾಯತ್ನ್ನು ಮಾಡಿದ್ದು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ, ಪಂಚಾಯತ್ ವ್ಯಾಪ್ತಿಯ ಡೀಮ್ಡ್ ಫಾರೆಸ್ಟ್ನ್ನು ಸರ್ವೆ ಮಾಡಿ ಈಗಾಗಲೇ ಸರಕಾರಕ್ಕೆ ಕಳುಹಿಸಲಾಗಿದೆ ಮುಂದೆ ಈ ಬಗ್ಗೆ ವರದಿ ಬಂದ ನಂತರವಷ್ಟೇ ಮುಂದಿನ ಕ್ರಮವನ್ನು ಕೈಗೊಳ್ಳಬಹುದೆಂದು ಗ್ರಾಮಕರಣಿಕರು ಉತ್ತರಿಸಿದರು. ಹಾಗಾದರೆ ಪಂಚಾಯತ್ ಕಟ್ಟಡ ಯಾವಾಗ ಆಗುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಅಲ್ಲವೇ ಎಂದು ಗ್ರಾಮಸ್ಥರು ಮರು ಪ್ರಶ್ನಿಸಿದರು.

ಉದ್ಯೋಗ ಖಾತರಿಯಿಂದ ಅನ್ಯಾಯ : ಉದ್ಯೋಗ ಖಾತರಿ ಯೋಜನೆಯಲ್ಲಿ ರೂ 50 ಸಾವಿರದ ಕೆಲಸವಾದರೆ ಅದರಲ್ಲಿ ಕೃಷಿಕರಿಗೆ 23 ಸಾವಿರ ಮಾತ್ರ ಅನುದಾನ ಬರುತ್ತದೆ. ಕೆಲವರಿಗೆ 10 ದಿನದಲ್ಲಿ ಹಣ ಸಿಗುತ್ತದೆಂದು ಪಂಚಾಯತ್ ಭರವಸೆ ನೀಡುತ್ತದೆ ಆದರೆ ಈವರೆಗೆ ಅನುದಾನ ಬಂದಿರುವುದಿಲ್ಲ ಈ ಯೋಜನೆಯಿಂದ ಜನರಿಗೆ ಅನ್ಯಾಯವಾಗುತ್ತಿದೆ ಈ ಬಗ್ಗೆ ಗ್ರಾಮಸಭೆಯಲ್ಲಿ ಸರಿಯಾದ ನಿರ್ಣಯವನ್ನು ಮಾಡಬೇಕು ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಯಾರು ಅನುದಾನವನ್ನು ನೀಡುವುದೆಂದು ತಿಳಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಈ ಯೋಜನೆಯಲ್ಲಿ ಆಗಿರುವ ಗೊಂದಲದ ಬಗ್ಗೆ ಮಾಹಿತಿಯನ್ನು ನೀಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಲ್ಲದಿರುವುದರಿಂದ ಏನೂ ಮಾತನಾಡಲು ಸಾಧ್ಯವಿಲ್ಲ. ಪಿಡಿಓ ಜಯಪ್ರಕಾಶ್ ಬಂದ ನಂತರ ವಿಚಾರಿಸಿರಿ ಎಂದು ನೋಡೆಲ್ ಅಧಿಕಾರಿ ಶಿವಾನಂದ ಕಾಯ್ಕೆಣಿ ಸಲಹೆ ನೀಡಿದರು. ಪಿಡಿಓ ರಜೆ ಮುಗಿಸಿ ಬಂದ ನಂತರ ಮಾಹಿತಿಯನ್ನು ತೆಗೆದು ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡುವ ವ್ಯವಸ್ಥೆಯನ್ನು ಮಾಡಲಾಗುವುದೆಂದು ಪ್ರಭಾರ ಪಿಡಿಓ ರಾಜೀವಿ ಭರವಸೆಯನ್ನು ನೀಡಿದರು.

ಪರಿಶಿಷ್ಟ ಪಂಗಡದವರಿಗೆ ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ನೀಡಿರುವ ಟಿಲ್ಲರ್ಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಸವಲತ್ತುಗಳನ್ನು ಎಷ್ಟು ಜನ ಪಡೆದುಕೊಂಡಿದ್ದಾರೆ. ಎಷ್ಟು ಜನ ಮಾರಾಟ ಮಾಡಿದ್ದಾರೆಂದು ಲೆಕ್ಕ ನೀಡಿ ಎಂದು ಗ್ರಾಮಸ್ಥ ಭರತ್ ಶೆಟ್ಟಿ ಅವರು ಅಧಿಕಾರಿಗಳಲ್ಲಿ ಕೇಳಿದರು. ಮಾರಾಟ ಮಾಡಿರುವುದರ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿದೆ ಈ ಬಗ್ಗೆ
ಸರ್ವೆ ಮಾಡಲಾಗುತ್ತಿದೆ ಎಂದು ಕೃಷಿ ಅಧಿಕಾರಿ ವಿ.ಎಸ್.ಕುಲಕರ್ಣಿ ಉತ್ತರಿಸಿದರು.

ಮೆಸ್ಕಾಂ ಅಧಿಕಾರಿಣಿಯನ್ನು ಸೌಜನ್ಯದಿಂದ ಮಾತನಾಡಲು ತಿಳಿಸಿ : ಇರುವೈಲ್ ವ್ಯಾಪ್ತಿಯಲ್ಲಿ ಪದೇ ಪದೇ ಪವರ್ ಕಟ್ ಯಾಕೆ.? ಸಮಸ್ಯೆಗಳು ಕಂಡು ಬಂದಾಗ ಇಲಾಖೆಗೆ ಕರೆ ಮಾಡಿದರೆ. ಕರೆ ಸ್ವೀಕರಿಸುವ ಅಧಿಕಾರಿಣಿ ದರ್ಪದಿಂದ ಮಾತನಾಡುತ್ತಾರೆ ಎಂದು ಗ್ರಾಮಸ್ಥ ಯಶೋಧರ ಆರೋಪಿಸಿ ತೋಡಾರ್ ಫೀಡರ್ನಿಂದ ತೊಂದರೆಯಾಗುತ್ತಿದೆ. ಸೀಮೆಎಣ್ಣೆಯೂ ಇಲ್ಲದಿರುವುದರಿಂದ ಮಕ್ಕಳ ಓದಿಗೆ ತೊಂದರೆಯಾಗುತ್ತಿದೆಯೆಂದು ಈ ಬಗ್ಗೆ ಸೂಕ್ತವಾದ ಕ್ರಮವನ್ನು ಕೈಗೊಳ್ಳಿ ಎಷ್ಟು ದಿನದಲ್ಲಿ ಸರಿ ಪಡಿಸುತ್ತೀರೆಂದು ಮಾಹಿತಿ ನೀಡಿ ಎಂದು ಆಗ್ರಹಿಸಿದಾಗ ಮೆಸ್ಕಾಂ ಅಧಿಕಾರಿ ಪ್ರಕಾಶ್ ಅವರು ಉತ್ತರಿಸಿ ಪ್ರಾಕೃತಿಕ ವಿಕೋಪದಿಂದ ಕೆಲವು ಕಡೆ ಸಮಸ್ಯೆಗಳಾಗುತ್ತಿವೆ ಆದಷ್ಟು ಬೇಗ ಸರಿ ಪಡಿಸುತ್ತಿದ್ದೇವೆ ಎಂದು ಉತ್ತರಿಸಿದಾಗ ಆಕ್ರೋಶಗೊಂಡ ಗ್ರಾಮಸ್ಥರು ಬೇಸಿಗೆ ಸಮಯದಲ್ಲಿ ತಾವು ಯಾವ ವಿದ್ಯುತ್ ಕಂಬಗಳಲ್ಲಿ ತೊಂದರೆ ಇದೆ ಎಂದು ಪರಿಶೀಲನೆ ಮಾಡುವುದಿಲ್ಲ ಮಳೆಗಾಲದ ಸಮಯದಲ್ಲಿ ಮಾತ್ರ ಪರಿಶೀಲನೆಗೆ ಬರುತ್ತೀರೆಂದು ಎಂದು ತರಾಟೆಗೆ ತೆಗೆದುಕೊಂಡರು. 15 ದಿನದೊಳಗೆ ಸಮಸ್ಯೆಯುನ್ನು ಸರಿ ಪಡಿಸಲಾಗುವುದು ಎಂದು ಉತ್ತರಿಸಿದರು.

ಅಂಗನವಾಡಿ ಮಕ್ಕಳ ಯೂನಿಫಾರಂಗಾಗಿ ಜಗಳ ಮಾಡಿದ ಗ್ರಾಮಸ್ಥರು : ಇರುವೈಲಿ ಪೊರಿಮೇಲು ಮತ್ತು ಮುಳಿಬೆಟ್ಟಿನಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತಕಟ್ಟವಿಲ್ಲ. ಅಂಗನವಾಡಿ ಕೇಂದ್ರಗಳಿಗೆ ಸರಕಾರದಿಂದ ಅನುದಾನಗಳು ಬರುವುದಿಲ್ಲ ಜನರ ಸಹಕಾರದಿಂದಲೇ ಎಲ್ಲಾ ವ್ಯವಸ್ಥೆಗಳು ಆಗಬೇಕಾಗಿದೆ. ಅಂಗನವಾಡಿ ಕಾರ್ಯಕತರ್ೆಯರು ಉತ್ತಮ ಸೇವೆಗಳನ್ನು ನೀಡುತ್ತಿದ್ದಾರೆ ಆದ್ದರಿಂದ ಕಾರ್ಯಕತರ್ೆಯರಿಗೆ ಯಾರೂ ಬಾಯಿಗೆ ಬೈದು ಬೆದರಿಕೆ ಹಾಕಬೇಡಿ ಏನು ಸಮಸ್ಯೆಯಿದ್ದರೂ ನಮ್ಮ ಬಳಿ ತಿಳಿಸಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಡುಬಿದಿರೆ ವಲಯದ ಮೇಲ್ವೀಚಾರಕಿ ನಾಗರತ್ನ ಗ್ರಾಮಸಭೆಯಲ್ಲಿ ಖಡಕ್ಕಾಗಿ ಹೇಳಿದರಲ್ಲದೆ ಮಕ್ಕಳಿಗೆ ಯಾರೆಲ್ಲಾ ಯೂನಿಫಾರಂ ನೀಡಿದ್ದಾರೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು.

ಬೆದರಿಕೆ ನೀಡುವುದು ನಾವಲ್ಲಾ ನೀವು. ಮಕ್ಕಳಿಗೆ ಯೂನಿಫಾರಂ ನೀಡಬೇಕೆಂದು ಸಮನ್ವಯ ಸಮಿತಿಯವರಿಗೆ ಒತ್ತಡ ಹೇರುವುದು ನೀವು ಎಂದು ಆರೋಪಿಸಿದಾಗ ಸ್ವಲ್ಪ ಹೊತ್ತಿನ ಮಾತಿನ ಚಕಾಮಕಿ ನಡೆಯಿತು. ಮಾತಿನ ದಾಟಿ ವೈಯಕ್ತಿಕವಾಗಿ ಹೋಗುತ್ತಿರುವುದನ್ನು ಗಮನಿಸಿದ ನೋಡೆಲ್ ಅಧಿಕಾರಿ ತಾವು ತಮ್ಮ ಇಲಾಖೆಯ ಬಗ್ಗೆ ಮಾಹಿತಿಯನ್ನು ನೀಡಿ ಹೊರತು ಜಗಳವನ್ನು ಮಾಡಬೇಡಿ ಎಂದು ಸಮಧಾನಿಸಿದರು.

ಉಪಾಧ್ಯಕ್ಷೆ ಬ್ರಿಜಿತ್ ಕುಟಿನ್ಹಾ, ಮಾಜಿ ಅಧ್ಯಕ್ಷ ವಲೇರಿಯನ್ ಕುಟಿನ್ಹಾ, ಸದಸ್ಯ ಅಬ್ದುಲ್ ರಝಾಕ್ ಸಹಿತ ಇತರ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದರು.

By suddi9

Leave a Reply

Your email address will not be published. Required fields are marked *