ಬಂಟ್ವಾಳ : ತಾಲೂಕು ತುಂಬೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಇದರ ವಾರ್ಷಿಕ ಮಹಾಸಭೆ ತುಂಬೆ ಶ್ರೀ ರಾಮ ನಗರದ ಶ್ರೀ ಶಾರದಾ ಸಭಾಭವನದಲ್ಲಿ ಜರಗಿತು.
ಸಭೆಯಲ್ಲಿ ವಿದ್ಯಾರ್ಥಿ ವೇತನ, ಅನಾರೋಗ್ಯರಿಗೆ ಔಷಧೋಪಚಾರಕ್ಕೆ ಸಹಾಯಧನ, ಪರಿಸರದ ಬಡ ಕುಟುಂಬಗಳಿಗೆ ಅಕ್ಕಿ ವಿತರಣಾ ಕಾರ್ಯಕ್ರಮ ನಡೆಯಿತು.
15ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಸಮಿತಿಯನ್ನು ರಚಿಸಲಾಯಿತು.
ಟಿ.ಸೀತಾರಾಮ ಬೆಳ್ಚಡ, ಟಿ.ಗಣೇಶ ಸುವರ್ಣ, ಅರುಣ್ ಕುಮಾರ್ ಶೆಟ್ಟಿ ನುಳಿಯಾಲುಗುತ್ತು , ಟಿ.ಸೋಮಪ್ಪ ಕೋಟ್ಯಾನ್, ರಾಘವ ಬಂಗೇರ, ಪದ್ಮನಾಭ ಮಾಸ್ಟರ್, ಶೋಭಾ ಗೋಪಾಲ ಮೈಂದನ್ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಿ.ತುಂಬೆ ಅವರು ಸ್ವಾಗತಿಸಿ, ಪ್ರಸ್ತಾವಿಸಿ, ಲೆಕ್ಕಪತ್ರ ಮಂಡಿಸಿದರು.ಸಂತೋಷ್ ಕೋಟ್ಯಾನ್ ವಂದಿಸಿದರು. ಸುಶಾನ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.