ಬಂಟ್ವಾಳ: ಶಂಭೂರು ಗ್ರಾಮ ಬೊಂಡಾಲ ನಿವಾಸಿ, ಭೂಮಾಪನ ಇಲಾಖೆ ನಿವೃತ್ತ ಅಧಿಕಾರಿ, ಪ್ರಸಿದ್ದ ಯಕ್ಷಗಾನ ತಾಳಮದ್ದಳೆ ಅರ್ಥದಾರಿ ರಾಮಣ್ಣ ಶೆಟ್ಟಿ (81 ) ಆ. 28ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಉದ್ಯಮಿ ಸಚ್ಚಿದಾನಂದ ಶೆಟ್ಟಿ ಸಹಿತ ಇಬ್ಬರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
2808btlph1 RAMANNA SHETTY copyಅವರು ಯಕ್ಷಗಾನ ಕ್ಷೇತ್ರದ ದಿಗ್ಗಜ ಎಂಬ ಹೆಸರಾಂತ ದಿ| ಬೊಂಡಾಲ ಜನಾರ್ದನ ಶೆಟ್ಟಿರ ಪುತ್ರರಾಗಿದ್ದು ಸರ್ವೆ ರಾಮಣ್ಣ ಶೆಟ್ಟಿ ಎಂದೇ ಪ್ರಸಿದ್ದರು. ಪ್ರಗತಿಪರ ಕೃಷಿಕನಾಗಿ, ಸಾಮಾಜಿಕ ಕ್ಷೇತ್ರದಲ್ಲಿ ವಿವಿಧ ಸಾಂಸ್ಕ್ರತಿಕ ಸಂಘಟನೆಯಲ್ಲಿ ತೊಡಗಿದವರು.
ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅವರ ಬಾಲ್ಯದ ಸ್ನೇಹಿತರು ಯಕ್ಷಗಾನ ಅರ್ಥದಾರಿಗಳಾದ ನಿವತ್ತ ಶಿಕ್ಷಕರಾದ ನಾಟಿ ಕೃಷ್ಣರಾಜ ಶೆಟ್ಟಿ, ದಿಂಡಿಕೆರೆ ಕೆ. ಗೋವಿಂದ ಭಟ್, ರಾಯಸ ಶ್ರೀನಿವಾಸ, ಪದ್ಮನಾಭ ಭಂಡಾರಿ ಕಲ್ಯಾರು, ವಾಮನ ಕುಲಾಲ್, ಜಿ.ಪಂ. ಸದಸ್ಯರಾದ ಮಮತಾ ಡಿ.ಎಸ್. ಗಟ್ಟಿ, ಚಂದ್ರಪ್ರಕಾಶ್ ಶೆಟ್ಟಿ,. ತಾ.ಪಂ. ಸದಸ್ಯ ಆನಂದ ಎ. ಶಂಭೂರು, ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಯಶೋದರ ಕರ್ಬೆಟ್ಟು, ಬುಡಾ ಅಧ್ಯಕ್ಷ ಪಿಯೂಸ್ ಎಲ್. ರೊಡ್ರಿಗಸ್, ಕಾಂಗ್ರೆಸ್ ನಾಯಕ ಮಂಜುನಾಥ ಭಂಡಾರಿ, ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಬಂಟ್ವಾಳ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪ್ರಕಾಶ ಕಾರಂತ, ಗಣ್ಯರಾದ ಜಗನ್ನಾಥ ಚೌಟ, ಡಾ| ಪ್ರಶಾಂತ ಮಾರ್ಲ ಸಹಿತ ಪ್ರಮುಖರು ಮನೆಗೆ ಭೇಟಿಯಾಗಿ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.

By suddi9

Leave a Reply

Your email address will not be published. Required fields are marked *