ಕೈಕಂಬ:ಎಸ್‍ಕೆಎಎಸ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ನ “ಆಶಿಯಾನಾ” ವಸತಿ ಸಮುಚ್ಚಯಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಅವರು ರವಿವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಾ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಐಟಿ ಪಾರ್ಕ್‍ಗೆ ಸಮೀಪದಲ್ಲಿ ನಿರ್ಮಾವಾಗಲಿರುವ ಈ ವಸತಿ ಸಮುಚ್ಚಯ ಬೇಕಾದ ಎಲ್ಲ ಅನುಕೂಲತೆಯನ್ನಯ ಹೊಂದಿದೆ. ಒಳ್ಳೆಯ ಪರಿಸರದಲ್ಲಿ ಗ್ರಾಹಕರಿಗೆ ಎಲ್ಲ ಸೌಲಭ್ಯಗಳನ್ನು ನೀಡುವ ಉದ್ದೇಶ ಸ್ವಾಗತಾರ್ಹ, ಜತೆಗೆ ವೈಜ್ಞಾನಿಕ ದೃಷ್ಟಿಕೋನ ಅಗತ್ಯವಾಗಿದೆ. ವಸತಿ ಸಮುಚ್ಚಯವು ಒಂದು ವರ್ಷದೊಳಗೆ ಗ್ರಾಹಕರ ಬಳಕೆಗೆ ಬರಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕ ಬಿ.ಎ.ಮೊಯಿದಿನ್ ಬಾವಾ, ಉಳಿಪಾಡಿಗುತ್ತು ರಾಜೇಶ್ ನಾಯಕ್, ಗಂಜಿಮಠ ಗ್ರಾ.ಪಂ. ಅಧ್ಯಕ್ಷೆ ,ಮಾಲತಿ, ಉಪಾಧ್ಯಕ್ಷ ಝಕೀರ್, ತಾಲೂಕು ಪಂಚಾಯತ್ ಸದಸ್ಯ ಜಾನ್ಸನ್ ಲೋಬೋ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನೋದ್ ಮಾಡ, ಉದ್ಯಮಿ ಜಯರಾಮ್ ಎಂ.ಶೆಟ್ಟಿ ಜಾಗದ ಮಾಲಕಿ ಸರಸ್ವತಿ ಜೆ.ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಅರುಣ್, ಕಿರಣ್ ಶೆಟ್ಟಿ, ಶೇಖರ್, ಸುದರ್ಶನ್, ಸುಧೀರ್ ಶೆಟ್ಟಿ, ರಾಜಕೂಮಾರ್ ಶೆಟ್ಟಿ, ಸುನೀಲ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸಂಪತ್ ಶೆಟ್ಟಿ ಅವರು ವಸತಿ ಸಮುಚ್ಚಯದ ಬಗ್ಗೆ ಮಾಹಿತಿ ನೀಡುತ್ತಾ ಸುಸಜ್ಜಿತ ಜಿಮ್ನೆಶಿಯಂ, ಮಕ್ಕಳ ಆಟದ ತಾಣ, ಲ್ಯಾಂಡ್‍ಸ್ಕೇಪ್ ಗಾರ್ಡನ್, ಮಲ್ಟಿಪರ್ಪಸ್ ಪಾರ್ಟಿ ಹಾಲ್, ಇಂಡೋರ್ ಗೇಮ್ಸ್, ಸೆಕ್ಯೂರಿಟಿ ಸಿಸ್ಟಂ ವಿತ್ ಸಿಸಿ ಟಿವಿಯನ್ನು ಹೊಂದಲಿದೆ. ಗುರುಪುರ ಕೈಕಂಬ ರಾಷ್ಟ್ರೀಯ ಹೆದ್ದಾರಿಯ ತಾಗಿಕೊಂಡು ನಿರ್ಮಾಣಗೊಳ್ಳಲಿರುವ ಆಶಿಯಾನಾ ವಸತಿ ಸಮುಚ್ಚಯ ನೆಲಅಂತಸ್ತು ಸೇರಿ ಒಟ್ಟು 6 ಅಂತಸ್ತುಗಳನ್ನು ಹೊಂದಿರುತ್ತದೆ. ಆಶಿಯಾನ ವಸತಿ ಸಮುಚ್ಚಯವು 2ಬಿಎಚ್‍ಕೆ ಮತ್ತು 1ಬಿಎಚ್‍ಕೆಯ ಒಟ್ಟು 50 ಫ್ಲ್ಯಾಟುಗಳನ್ನೊಳಗೊಳ್ಳಲಿದೆ.
ಅನೇಕ ವಿಶಿಷ್ಟವಾದ ಸವಲತ್ತುಗಳನ್ನು ಹೊದಲಿರುವ ಆಶಿಯಾನ ವಸತಿ ಸಮುಚ್ಚಯವು ಅತ್ಯುತ್ತಮ ಗುಣಮಟ್ಟದೊಂದಿಗೆ ನಿರ್ಮಿಸಲ್ಪಡುತ್ತಿದೆ. ಗುರುಪುರ ಕೈಕಂಬ ಪ್ರದೇಶದಲ್ಲಿ ಫ್ಲ್ಯಾಟ್ ಹೊಂದುವ ಬಗ್ಗೆ ಅನೇಕ ವರ್ಷಗಳಿಂದ ಹಂಬಲಿಸುತ್ತಿರುವ ಗ್ರಾಹಕರಿಗೆ ಕೈಗೆಟುಕುವ ರೀತಿಯಲ್ಲಿ ದರ ನಿಗದಿಪಡಿಸಿದ್ದು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ. ಇದೀಗ ಮೊದಲ 10 ಫ್ಲ್ಯಾಟ್ ಬುಕ್ಕಿಂಗ್‍ಗೆ ಆಕರ್ಷಕ ಕೊಡುಗೆಯನ್ನು ಅದು ನೀಡುತ್ತಿದೆ.
ಆಶಿಯಾನಾ ವಸತಿ ಸಮುಚ್ಚಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ನಗರದ ಪಾಂಡೇಶ್ವರದ ಸರ್ಕಲ್‍ನಲ್ಲಿರುವ ಎಸ್‍ಕೆಎಎಸ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್‍ನ ಆಡಳಿತ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಹೇಳಿದರು. ಮಧು ಕಾರ್ಯಕರಮವನ್ನು ನಿರೂಪಿಸಿದರು.