ಭಳಿರೇ ಶಹಬ್ಬಾಸ್… ಯಕ್ಷಲೋಕ್ಕವೇ ಮೆಚ್ಚಿ ಅಹುದಹುದೆನ್ನುವ ರೀತಿಯಲ್ಲಿ ಅಶಕ್ತ ಕಲಾವಿದರ ಅತಂತ್ರ ಬದುಕಿಗೆ ಗಟ್ಟಿ ಪಂಚಾಂಗವಾಗಿ ಯಕ್ಷಧುೃವ ಪಟ್ಲ ಫೌಂಡೇಶನ್ ಟ್ರಸ್ಟ್ ಮೂಡಿ ಬಂದಿರುವುದು ಒಂದು ಅವಿಸ್ಮರಣೀಯ ಬೆಳವಣಿಗೆ.

*ಯಕ್ಷಧುೃವ*ದ ಧ್ಯೇಯ…
ಹೌದು ಅಶಕ್ತ ಕಲಾವಿದರಿಗೆ ನೆರವು, ಯಕ್ಷಗಾನ ಕಲಾವಿದರ ಕುಟುಂಬ ಸದಸ್ಯರಿಗೂ ಆರೋಗ್ಯ, ಶಿಕ್ಷಣ, ವಿಮಾ ಯೋಜನೆ, ಅಸಕ್ತರಿಗೆ ಯಕ್ಷ ಶಿಕ್ಷಣ ನೀಡುವುದು ಅಲ್ಲದೆ, ನಿವೃತ್ತ ಕಲಾವಿದರಿಗೆ ಮಾಸಿಕ ವೇತನ ನೀಡುವ ಮಹತ್ವದ ಯೋಜನೆಗಳನ್ನು ಫೌಂಡೇಶನ್ ಹಾಕಿಕೊಂಡಿದೆ.

5

maxresdefault

pattla

ಆರಂಭಿಕವಾಗಿ ಯಕ್ಷಲೋಕದಲ್ಲಿ ಪ್ರಖ್ಯಾತಿ ಪಡೆದು ಅತಂತ್ರ ಬದುಕು ಕಾಣುವ ಹತು ಮಂದಿ ಅಶಕ್ತ ಕಲಾವಿದರ ಬಾಳಿಗೆ ಆಸರೆಯಾಗಿ ದೊಡ್ಡ ಮೊತ್ತದ ನೆರವು ನೀಡಿ ಗೌರವಿಸುವುದು ಯಕ್ಷ ಪ್ರಿಯರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಹಿರಿಯರಾದ ಜಗನ್ನಾಥ ಆಚಾರಿ, ಉದಯ ಕುಮಾರ್, ತುಂಬ್ರಿ ಭಾಸ್ಕರ, ಉದಯ ನಾವಡ, ಪರಮೇಶ್ವರ ಹೆಗಡೆ, ಗಣೇಶ್ ಕೊರಿಕಾಡಿ, ಕೊರಗಪ್ಪ ನಾಯ್ಕ, ಜನಾರ್ಧನ ಜೋಗಿ, ಮುಂಡ್ಕೂರು ಜಯರಾಮ ಶೆಟ್ಟಿ, ದಾಸನಡ್ಕ ರಾಮ ಕುಲಾಲ್ ಅವರುಗಳಿಗೆ ತಲಾ 50ಸಾವಿರ ರೂ. ಚೆಕ್, ಪದಕ, ಶಾಲು, ಸ್ಮರಣಿಕೆಗಳನ್ನೊಳಗೊಂಡ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು. ಅಲ್ಲದೆ ಇತ್ತೀಚೆಗೆ ನಿಧನರಾದ ಕಟೀಲು ಮೇಳದ ದೇವೀ ಪಾತ್ರಧಾರಿ ಬೆಳಾಲು ರಮೇಶ್ ಗೌಡ ಅವರನ್ನು ಕಳೆದುಕೊಂಡು ಅತಂತ್ರವಾಗಿರುವ ಅವರ ಕುಟುಂಬಕ್ಕೆ ಕೂಡಾ ಗೌರವಾರ್ಪಣೆ ಹಾಗೂ ನೆರವು ಸಲ್ಲಿಸಲಾಗಿದೆ.
ಅಶಕ್ತ ಕಲಾವಿದರ ಆಯ್ಕೆಗೆ ತಿಟ್ಟ್ಟು, ಜಾತಿ, ಪ್ರದೇಶಿಕ, ರಾಜಕೀಯ ಬೇಧ-ಭಾವಗಳಿಲ್ಲ ಅನ್ನುವುದು ಇಲ್ಲಿ ಸ್ಪಷ್ಟ. ಇದು ಜಸ್ಟ್ ಫಾರ್ ಪ್ರಾಜೆಕ್ಟ್ ಆಗಿರದೆ ನಿಜಾರ್ಥದ ಸೇವೆ ಅನಿಸಿದೆ.
ಇವೆಲ್ಲವುಗಳ ಈಡೇರಿಕೆಗೆ ಕಟೀಲು ಮೇಳದ ಪ್ರಸಿದ್ದ ಭಾಗವತ *ಯಕ್ಷಲೋಕದ ಧ್ರುವತಾರೆ* ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಟ್ರಸ್ಟ್ ಹತ್ತು ಕೋಟಿ ರೂ. ಗಳ *ಶಾಶ್ವತ ನಿ* ಸ್ಥಾಪಿಸಲು ಮುಂದಾಗಿದ್ದು ಈಗಾಗಲೇ ಬರವಸೆಯ ಕೈಗಳು ಪರಸ್ಪರ ಒಂದಾಗಿವೆ.
*ಯಕ್ಷಧ್ರುವ*ನ ಈ ದಿಟ್ಟ ನಡೆಯ ಆರಂಭಕ್ಕೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲು, ಸಚಿವರುಗಳಾದ ರಮಾನಾಥ ರೈ, ಅಭಯಚಂದ್ರ ಜೈನ್, ಹಿರಿ-ಕಿರಿಯ ನೂರಾರೂ ಕಲಾವಿದರು, ನಾನಾ ಕ್ಷೇತ್ರಗಳ ಪ್ರಮುಖರು, ಕಲಾ ಪೋಷಕರು ಸಾಕ್ಷಿಯಾದರು.
ಅಲ್ಲದೆ ಫೌಂಡೇಶನ್ ಸದುದ್ದೇಶಗಳಿಗೆ ಸಹಕಾರದ ಭರವಸೆಗಳು ಹರಿದು ಬರುತ್ತಿದೆ.
ಬಾಲಿವುಡ್ ತಾರೆಯರಂತೆ *ಸ್ಟಾರ್ ವ್ಯಾಲ್ಯು* ಪಡೆದಿರುವ *ಯಕ್ಷಧ್ರುವ* ಪಟ್ಲ ಸತೀಶ್ ಶೆಟ್ಟರು ತನ್ನ ವೈಯಕ್ತಿಕ ಇಮೇಜ್ನಿಂದ ಕ್ರೋಢೀಕರಿಸಲು ಸಾಧ್ಯವಾದ ಧನ ಸಂಪನ್ಮೂಲವನ್ನು ಅಶಕ್ತರ ಏಳಿಗೆಗೆ ವಿನಿಯೋಗಿಸಲು ನಿರ್ಧರಿಸಿರುವುದಕ್ಕೆ ಹ್ಯಾಟ್ಯಾಪ್ ಹೇಳಲೇಬೇಕು.
ಯಕ್ಷಲೋಕದ *ರಾಜಧಾನಿ* ಎಂದೆಣಿಸಿಕೊಂಡ ಕಟೀಲಿನ ಕಲಾಮಾತೆ ಭ್ರಮರಾಂಬಿಕೆಯ ಸನ್ನಿಯ *ಸರಸ್ಪತೀ ಸದನ*ದಲ್ಲಿ ಉದಿಪನಗೊಂಡ ಈ *ಯಕ್ಷಧ್ರುವ ಪಟ್ಲ* ಫೌಂಡೇಶನ್ ಧ್ಯೇಯಗಳು ನಿರಂತರ ನೆರವೇರಲಿ ಎನ್ನುವ ಆಶಯ ಎಲ್ಲರದು.
-ಯಕ್ಷಗಾನ ಗೆಲ್ಲೆ-

ದೀಪ್ತಿ

By suddi9

Leave a Reply

Your email address will not be published. Required fields are marked *