ಬಂಟ್ವಾಳ: ಮಾಣಿಬೆಟ್ಟು ಶ್ರೀದುರ್ಗಾಂಬಿಕಾ ಕ್ಷೇತ್ರದ ಪುನರ್ ನಿರ್ಮಾಣದ ಬಗ್ಗೆ ಸಮಾಲೋಚನಾ ಸಭೆ ಹಾಗೂ ಸಾಧಕರ ಸನ್ಮಾನ ಸಮಾರಂಭ ಕ್ಷೇತ್ರದ ವಠಾರದಲ್ಲಿ ನಡೆಯಿತು.  ಕ್ಷೇತ್ರದ ಆಡಳಿತ ಧರ್ಮದರ್ಶಿ ಹರೀಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಪುನರ್ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು ಕಾಮಗಾರಿಗಳು ನಡೆಯುತ್ತಿದೆ. ಕ್ಷೇತ್ರವನ್ನು ಎಲ್ಲಾ ಭಕ್ತಾದಿಗಳ ಆಕರ್ಷಣೆಯ ಆರಾಧನಾ ಕೆಂದ್ರವಾಗಿ ರೂಪಿಸಲು ಸಂಕಲ್ಪಿಸಲಾಗಿದ್ದು ಈ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಕಮದಲ್ಲಿ ಕೈಜೋಡಿಸಿ ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿದೆ ಎಂದರು.

1 (1)
ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ನಾಯ್ಕ, ಲ್ಯಾಂಪ್ಸ್ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ್ ಎನ್.ಎಸ್., ಕೊಯಿಲ ಏಣಿತಡ್ಕ ಶ್ರೀ ದುರ್ಗಾಂಬಿಕಾ ಮರಾಟಿ ಸಂಘದ ಅಧ್ಯಕ್ಷ ನೇತ್ರಾಕ್ಷ, ಸುಳ್ಯ ಮರಾಟಿ ಸೇವಾ ಸಂಘದ ಅಧ್ಯಕ್ಷ ಸೀತಾನಂದ ಬೇರ್ಪಡ್ಕ ಅತಿಥಿಗಳಾಗಿ ಬಾಗವಹಿಸಿ ಕ್ಷೇತ್ರವನ್ನು ಪುನರ್ ನಿರ್ಮಿಸುವ ಬಗ್ಗೆ ಸಲಹೆ ಸೂಚನೆ ನೀಡಿದರು.
ಪ್ರಮುಖರಾದ ಸೀತಾರಾಮ ನಾಯ್ಕ, ರಾಮ ನಾಯ್ಕ, ಪೂಪ್ಪ ನಾಯ್ಕ ಆಲಂಕಾರು, ಜನಾರ್ಧನ ಪೆರಾಜೆ, ಅಶೋಕ್ ಬಲ್ನಾಡು, ಪ್ರೇಮಾ ಕೊಯಿಲ, ಸುಂದರ ನಾಯ್ಕ, ರಾಮಚಂದ್ರ ನಾಯ್ಕ, ರಾಧಾಕೃಷ್ಣ ನಾಯ್ಕ, ವಾಮನ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ಸೇವಾ ಸಮಿತಿ ಅಧ್ಯಕ್ಷ ಮಂಜಪ್ಪ ನಾಯ್ಕ ಸ್ವಾಗತಿಸಿದರು. ಕಾರ್ಯಾದ್ಯಕ್ಷ ಬಾಲಕೃಷ್ಣ ನಾಯ್ಕ್ ಕೆ.ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಕೆಂಬಾರೆ ವಂದಿಸಿದರು. ರಮ್ಯ ಮತ್ತು ತುಷಾರ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *