ಉಡುಪಿ: ಹೆಸರಾಂತ ಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ 25ನೇ ತುಳು ಚಿತ್ರ `ಏರೆಗ್ಲಾ ಪನೊಡ್ಚಿ’ ಇದರ ಧ್ವನಿಸುರುಳಿ ಬಿಡುಗಡೆ ಸಮಾರಂಭ ಆದಿತ್ಯವಾರ ಉಡುಪಿಯಲ್ಲಿ ನಡೆಯಿತು. ಗಿರಿಧರ ದಿವಾಣ ಸಂಗೀತ ನೀಡಿರುವ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಅನುರಾಧ ಭಟ್, ನಕುಲ್ ಅಭ್ಯಂಕರ್, ಸುಪ್ರಿಯಾ ಲೋಹಿತ್, ಶಿಲ್ಪಾ ಹಾಡಿದ್ದಾರೆ.

eregla panodchi

`ಚಾಲಿಪೋಲಿಲು’ ತುಳು ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಚಿತ್ರಕ್ಕೆ ಶುಭ ಹಾರೈಸಿದರು. ಚಿತ್ರದ ನಿರ್ದೇಶಕ ಕೋಡ್ಲು ರಾಮಕೃಷ್ಣ, ಸಾಹಿತ್ಯ ಬರೆದಿರುವ ಡಾ/ಉಮೇಶ್ ಭಟ್, ಸಂಗೀತ ನಿರ್ದೇಶಕ ಗಿರಿಧರ ದಿವಾಣ, ಚಿತ್ರದ ನಿರ್ಮಾಪಕರಾದ ಎಸ್.ಕೆ.ಶೆಟ್ಟಿ, ಸಂಕಲನಕಾರ ಬಸವರಾಜ ಅರಸ್, ಚಿತ್ರದ ನಟ ಸಂದೀಪ್ ಶೆಟ್ಟಿ, ನಟಿ ರಕ್ಷಾ ಶೆಣೈ, ಖ್ಯಾತ ಭರತನಾಟ್ಯ ವಿದುಷಿ ಮಂಜರಿ ಮಂಜರಿ ಚಂದ್ರ, ಚಿತ್ರದ ವಿತರಕ ಮೋಹನ್ದಾಸ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶುದ್ಧ ಮನೋರಂಜನೀಯ ಚಿತ್ರವಾದ ಏರೆಗ್ಲಾ ಪನೊಡ್ಚಿ ಮಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದ್ದು, ಅಕ್ಟೋಬರ್ 23 ಅಥವಾ ನವೆಂಬರ್ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ. ಒಂದು ವಠಾರದಲ್ಲಿ ನಡೆಯುವ ದಿನನಿತ್ಯದ ಆಗುಹೋಗುಗಳನ್ನು ಚಿತ್ರದಲ್ಲಿ ಬಿಂಬಿಸಲಾಗಿದ್ದು, ಕನ್ನಡ ಚಿತ್ರರಂಗ ಹಾಗೂ ತುಳುನಾಡಿನ ಖ್ಯಾತ ಕಲಾವಿದರು ನಟಿಸಿರುವುದು ಚಿತ್ರದ ವಿಶೇಷತೆಯಾಗಿದೆ. ಶಿವಧ್ವಜ್, ನೀತೂ, ಇಳಾ ವಿಟ್ಲ, ಅನಿತಾ ಭಟ್, ರೂಪಶ್ರೀ ವಕರ್ಾಡಿ, ಶೋಭಾ ರೈ, ಸಂದೀಪ್ ಶೆಟ್ಟಿ, ರಕ್ಷಾ, ಭೋಜರಾಜ ವಾಮಂಜೂರು, ಸುಂದರ ರೈ ಮಂದಾರ, ಅರವಿಂದ್ ಬೋಳಾರ್, ಶಶಿಧರ ಬೆಳ್ಳಾಯರು, ರವಿ ಸುರತ್ಕಲ್ ಹಾಗೂ ಇನ್ನಿತರ ಕಲಾವಿದರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಶಶಿಧರ ಶೆಟ್ಟರ್ ಛಾಯಾಗ್ರಹಣವಿದ್ದು, ತಮ್ಮ ಲಕ್ಷ್ಮಣ್ ಕಲಾ ನಿರ್ದೇಶನವಿದೆ.

By suddi9

Leave a Reply

Your email address will not be published. Required fields are marked *