ಉಡುಪಿ: ಅವಿಭಜಿತ ದ.ಕ ಉಡುಪಿ ಜಿಲ್ಲೆಯ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ ಕೊಡಲ್ಪಡುವ ಅತ್ಯುತ್ತಮ ವಲಯ ಪ್ರಶಸ್ತಿಯನ್ನು ಬಂಟ್ವಾಳ ವಲಯವು ಪಡೆದುಕೊಂಡಿದೆ.

ಉಡುಪಿಯ ಅಮ್ಮಣ್ಣಿರಾಮಣ್ಣಶೆಟ್ಟಿ ಸಭಾಭವನದಲ್ಲಿ ನಡೆದ ಜಿಲ್ಲಾ ರಜತ ಸಂಭ್ರಮದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಜಿಲ್ಲಾಧ್ಯಕ್ಷರಾದ ವಾಸುದೇವರಾವ್ರವರಿಂದ ವಲಯದ ಅಧ್ಯಕ್ಷರಾದ ಆನಂದ್ರವರು ಪಡೆದುಕೊಂಡರು. ಈ ಸಂದರ್ಭದಲ್ಲಿ ವಲಯದ ನಿಯೋಜಿತ ಅಧ್ಯಕ್ಷರಾದ ಸುಕುಮಾರ್, ಗೌರವ ಸಲಹೆಗಾರರಾದ ಟಿ. ಹರೀಶ್ರಾವ್, ಸತೀಶ್ ಬಂಟ್ವಾಳ, ದಯಾನಂದ.ಬಿ, ಪ್ರ.ಕಾರ್ಯದರ್ಶಿ ರಾಜೇಂದ್ರ, ಹರೀಶ್ ಕುಂದರ್, ಕೋಶಾಧಿಕಾರಿಗಳಾದ ರವಿ ಕಲ್ಪನೆ, ಜಯಂತ್ ಹಾಗೂ ವಲಯದ ಹೆಚ್ಚಿನ ಸದಸ್ಯರು ಉಪಸ್ಧಿತರಿದ್ದರು..