ಬಂಟ್ವಾಳ : ಮುಖ್ಯ ಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ಪುರಸಭೆಯ ಪಲ್ಲಮಜಲಿನಿಂದ ಕಾಮೇರೆಕೋಡಿ ಸೇತುವೆವರೆಗೆ (600ಮೀ) ಕಾಂಕ್ರೀಟ್ ರಸ್ತೆ ರಚನೆ ಮತ್ತು ಬರ್ಕಟ-ಕಲ್ಲಗುಡ್ಡೆ ರಸ್ತೆ ಕಾಮಗಾರಿಯ ಶಿಲಾನ್ಯಾಸವನ್ನು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
ಬೂಡಾ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ , ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ , ಉಪಾಧ್ಯಕ್ಷೆ ಯಾಸ್ಮಿನ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಸದಸ್ಯರಾದ ಮಹಮ್ಮದ್ ನಂದರಬೆಟ್ಟು, ರಾಮಕೃಷ್ಣ ಆಳ್ವ , ಸದಾಶಿವ ಬಂಗೇರಾ, ಪ್ರವೀಣ್ ಬಿ. , ಜಗ ದೀಶ್ ಕುಂದರ್, ಗಂಗಾಧರ ಪೂಜಾರಿ , ಪ್ರಭಾ ಸಾಲ್ಯಾನ್ , ಮಹಮ್ಮದ್ ಶರೀಫ್ , ಚಂಚಲಾಕ್ಷಿ, ಸಂಜೀವಿನಿ, ಜೆಸಿಂತಾ, ಮುಖ್ಯಾಧಿಕಾರಿ ಸುಧಾಕರ ಭಟ್ , ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೋ ಮತ್ತಿತರರು ಉಪಸ್ಥಿತರಿದ್ದರು.
