ಕೈಕಂಬ: ಕೊಡ್ಮಾಣ್ ಶಾರದಾ ಪೂಜಾ ಸೇವಾ ವೇದಿಕೆ ವತಿಯಂದ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ27ನೇ ವರ್ಷದ ಶಾರದಾ ಪೂಜಾ ಮಹೋತ್ಸವವು ಅ.20ರಂದು ಮಂಗಳವಾರ ಬೆಳಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿಯವರಿಂದ ಭಜನೆ, ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾಯಾಗ, ಪೂರ್ಣಾಹುತಿ ಮತ್ತು ಪೂಜೆ, ಶಾರದಾ ದೇವರಿಗೆ ಮಹಾಪೂಜೆ ನಡೆಯಿತು.

20 v p kodman 8

 

20 vp kodman7
ಸಭಾಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ಕಾಸರಗೋಡು ಎಡನೀರುಮಠ ಶ್ರೀ ಕೇಶವಾನಂದ ಭಾರತೀ ಶ್ರೀಪಾದರು ಆಶೀರ್ವಚನ ನೀಡಿದರು.ಅಧ್ಯಕ್ಷತೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಸಂಘಚಾಲಕರು ಮಾನ್ಯ ಡಾ.ವಾಮನ್ ಶೆಣೈ ,ಮುಖ್ಯ ಅತಿಥಿಯಾಗಿ ಉದ್ಯಮಿ ಸೇಸಪ್ಪ ಕೋಟ್ಯಾನ್ ಪಚಿನಡ್ಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗ್ರಾ.ಪಂ. ಕಾರ್ಯದರ್ಶಿ ಶಿವ್ ಲಾಲ್ ಚವ್ಹಾನ್ ಅವರನ್ನು ಸನ್ಮಾನಿಸಲಾಯಿತು.     ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಸ್ವಾಗತಿಸಿ, ವಿನೋದ್ ಕುಮಾರ್ ಧನ್ಯವಾದವಿತ್ತರು ಕಿನ್ನಿಕಂಬಳ ವಾದಿರಾಜಕಲ್ಲೂರಾಯ ಕಾರ್ಯ ಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *