ಕೈಕಂಬ ಸ್ಕಂದನಗರ: ಕಂದಾವರ ಸ್ಕಂದಶ್ರೀ ಸೇವಾ ಸಮಿತಿ ಸ್ಕಂದನಗರ ಇವರು ಪ್ರತಿವರ್ಷದಂತೆ ದೀಪಾವಳಿಯ ಶುಭ ಸಂದರ್ಭದಲ್ಲಿ ತುಡರ ಪರ್ಬವನ್ನು ಬಹಳ ಸಂಬ್ರಮ ಸಡಗರದಿಂದ ಇತ್ತೀಚಿಗೆ ಆಚರಿಸಲಾಯಿತು.
Scan copyಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ತುಳುನಾಡ ಬೊಳ್ಳಿ ರಾಜ್ಯ ಪ್ರಶಸ್ತಿ ವಿಜೇತ ದಯಾನಂದ ಕತ್ತಲ್ಸಾರ್ ಸಭಿಕರನ್ನು ಉದ್ದೇಶಿಸಿ “ಮಾನವ ಜನ್ಮ ಶ್ರೇಷ್ಠ ಜನ್ಮ ಇದನ್ನು ಮಾನವನಾಗಿ ಜೀವಿಸಿ, ಮಾನವನಾಗಿ ಇನ್ನೊಬ್ಬರಿಗೆ ಮಾದರಿಯಾಗಿ ಬಾಳಬೇಕಾದುದು ನಮ್ಮೆಲ್ಲರ ಕರ್ತವ್ಯ, ಪ್ರೀತಿ ಸ್ನೇಹ ಸೌಹಾರ್ದತೆ ಎಲ್ಲಾ ಧರ್ಮದ ತಳಹದಿ ಎಂದರು. ಸ್ಥಳೀಯರಾದ ಬೆರ್ನಾಡ ಸಿಕ್ವೇರಾ ರವರು ಬೆಳಕಿನಹಬ್ಬ ಎಲ್ಲರ ಜೀವನಕ್ಕೂ ಧರ್ಮಾಂದತೆಯೆಂಬ ಕತ್ತಲೆಯನ್ನು ಹೋಗಲಾಡಿಸಿ ಸ್ನೇಹದ ಬೆಳಕನ್ನು ಚೆಲ್ಲಲಿಯೆಂದು ಹಾರೈಸಿದರು.ಈ ಸಂದರ್ಭದಲ್ಲಿ ವಿಶ್ವಹಿಂದು ಪರಿಷತ್ ದುರ್ಗಾವಾಹಿನಿ ಜಿಲ್ಲಾ ಸಹ ಸಂಚಾಲಕಿ ವಿದ್ಯಾವಿಜಯ ಶಿಬ್ರಿಕೆರೆ , ಉದ್ಯಮಿ ರಾಜೇಂದ್ರ ಕಿನ್ನಿಕಂಬ್ಳ, ಕಂದಾವರ ಪಂಚಾಯತ್ ಮಾಜಿ ಅಧ್ಯಕ್ಷ ಜಯರಾಮ್ ಪೂಜಾರಿ, ಡಾ.ಪುಷ್ಪಲತಾ ಶರತ್ ಭಂಡಾರಿ, ಮೋಹನ್ ಸಾಲ್ಯಾನ್, ಸಂಘದ ಅಧ್ಯಕ್ಷ ನವೀನ್ ಸ್ಕಂದನಗರ ವೇದಿಕೆಯಲ್ಲಿದ್ದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಭರತ್ ಕರ್ಕೇರ ನಿರೂಪಿಸಿದರು. ಧನ್ಯವಾದ ಸಮರ್ಪಣೆಯನ್ನು ಸಂಘದ ಮಾಜಿ ಅಧ್ಯಕ್ಷ ಶೇಕರ್ ಶೆಟ್ಟಿಗಾರ್ ನೆರವೇರಿಸಿದರು.

By suddi9

Leave a Reply

Your email address will not be published. Required fields are marked *