ಬಂಟ್ವಾಳ : ಕಳೆದ ವಾರ ಬಿ.ಸಿ.ರೋಡು-ಬಂಟ್ವಾಳ ಪರಿಸರದಲ್ಲಿ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಬಿ.ಸಿ.ರೋಡಿಗೆ ಬಂದಿದ್ದ ರ್ಯಾಪಿಡ್ ಆ್ಯಕ್ಷನ್ ಪೋರ್ಸ್, ಕೆಎಸ್‍ಆರ್‍ಪಿ, ಡಿಎಆರ್, ವಜ್ರ, ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸರ ತಂಡ ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಜನರಿಗೆ ದೈರ್ಯ ತುಂಬುವ ನಿಟ್ಟಿನಲ್ಲಿ ಬಿ.ಸಿ.ರೋಡಿನಲ್ಲಿ ಸೋಮವಾರ ಸಂಜೆ ಪಥ ಸಂಚಲನ ನಡೆಸಿದರು.
5

6

7ಬಿ.ಸಿ.ರೋಡಿನ ತಾಲೂಕು ಕಚೇರಿಯಿಂದ ಆರಂಭಗೊಂಡ ಈ ಪಥಸಂಚಲನ ಕೈಕಂಬ ಪೊಳಲಿ ದ್ವಾರದ ಬಳಿಯವರೆಗೆ ಸಾಗಿ ವಾಪಾಸು ನಗರ ಠಾಣೆಯಲ್ಲಿ ಸಂಪನ್ನಗೊಂಡಿತು. ಬಂಟ್ವಾಳ ನಗರ ಠಾಣಾ ಎಸ್‍ಐ ನಂದ ಕುಮಾರ್, ಗ್ರಾಮಾಂತರ ಠಾಣಾ ಎಸ್‍ಐ ರಕ್ಷಿತ್ ಹಾಗೂ ಟ್ರಾಫಿಕ್ ಎಸ್‍ಐ ಚಂದ್ರ ಶೇಖರ್‍ರವರ ನೇತೃತ್ವದಲ್ಲಿ ಈ ಪಥ ಸಂಚಲನ ನಡೆಯಿತು.

By suddi9

Leave a Reply

Your email address will not be published. Required fields are marked *