ಬಂಟ್ವಾಳ: ನರಿಕೊಂಬು ಗ್ರಾಮ್ರದ ಜನತಾಗ್ರಹ ನಿವಾಸಿ ಬಿ.ಉಮೇಶ ಪುಜಾರಿ(52) ಎಂಬವರು ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಆ.20ರಂದು ಬೆಳಿಗ್ಗೆ ತನ್ನ ಮಾವನ ಮಗಳಾದ ಜಯಂತಿ ಎಂಬಾಕೆಯನ್ನು ಅವಳ ಮನೆಗೆ ಬಿಟ್ಟು ಬರುತ್ತೇನೆ ಎಂದು ಹೋದವರು ಬಳಿಕ ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿದ್ದಾರೆ. ಆಬಳಿಕ ಅವರ ದೂರವಾಣಿಗೆ ಕರೆ ಮಾಡಿದರು ಅದು ಸ್ತಬ್ದಗೊಂಡಿರುವುದಾಗಿ ಅವರ ಪತ್ನಿ ಗೀತಾ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
BTW_NOV17_15 copyಸುಮಾರು 5 ಅಡಿ ಎತ್ತರವಿರುವ ಇವರು ಗೋಧಿ ಮೈಬಣ್ಣ ಹೊಂದಿದ್ದಾರೆ. ನಾಪತ್ತೆಯಾದ ದಿನದಂದು ಹಳದಿ ಬಣ್ಣದ ನೀಲಿ ಗೆರೆಗಳಿರುವ ಟೀಶರ್ಟ್ ಹಾಗೂ ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಕನ್ನಡ ಹಾಗೂ ತುಳು ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

By suddi9

Leave a Reply

Your email address will not be published. Required fields are marked *