ಬಂಟ್ವಾಳ: ನರಿಕೊಂಬು ಗ್ರಾ.ಪಂ. ಅನುದಾನದಿಂದ ಶೇಡಿಗುರಿ ರಸ್ತೆಯಿಂದ ಶ್ರೀ ಕೋದಂಡರಾಮಚಂದ್ರ ದೇವಸ್ಥಾನದವರೆಗೆ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆಯನ್ನು ಪುರೋಹಿತರಾದ ಕೇಶವಶಾಂತಿ ನಾಟಿಯವರು ನಡೆಸಿದರು.

ಈ ಸಂದರ್ಭ ನರಿಕೊಂಬು ಗ್ರಾ.ಪಂ. ಉಪಾಧ್ಯಕ್ಷೆ ರಾಜೀವಿ ಕೆ.ಪೂಜಾರಿ, ಸದಸ್ಯರಾದ ಮಾಧವ ಕರ್ಬೆಟ್ಟು, ಕಿಶೋರ್ ಶೆಟ್ಟಿ, ಪಾಣೆಮಂಗಳೂರು ರೈ.ಸೇ.ಸ.ಬ್ಯಾಂಕಿನ ನಿರ್ದೇಶಕರಾದ ಪ್ರೇಮನಾಥ ಶೆಟ್ಟಿ, ತ್ರಿವೇಣಿ ಮೋನಪ್ಪ ಪೂಜಾರಿ, ಅರ್ಚಕರಾದ ಬಾಲಕೃಷ್ಣ ಭಟ್, ಕಾಂಟ್ರಕ್ಟರ್ ಲತೀಫ್, ದೇವಸ್ಥಾನದ ಅಧ್ಯಕ್ಷರಾದ ಪುರುಷೋತ್ತಮ ನಾಟಿ ಉಪಸ್ಥಿತರಿದ್ದರು