ಬಂಟ್ವಾಳ: ಈದ್ ಮಿಲಾದ್ ರ್ಯಾಲಿ ಆಯಾಯ ಮೊಹಲ್ಲಾ ಪ್ರದೇಶಕ್ಕೆ ಸೀಮಿತವಾಗಿದ್ದು, ನಿಯಮ ಮೀರಿ ನಡೆಯುವ ದ್ವಿಚಕ್ರ ಮತ್ತಿತರ ವಾಹನ ರ್ಯಾಲಿಗೆ ಪೊಲೀಸ್ ಇಲಾಖೆ ಅನುಮತಿ ನೀಡುವುದಿಲ್ಲ. ಕಾನೂನು ಉಲ್ಲಂಘಿಸಿ ಇಂತಹ ಯಾವುದೇ ಪ್ರಕರಣ ಕಂಡು ಬಂದರೆ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್ ಎಚ್ಚರಿಸಿದರು.
20btl-Police
ತಾಲ್ಲೂಕಿನ ಬಿ.ಸಿ.ರೋಡ್ ನಗರ ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆದ ಈದ್ಮಿಲಾದ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಂಚಾರಿ ಠಾಣಾಧಿಕಾರಿ ಚಂದ್ರಶೇಖರಯ್ಯ, ಅಪರಾಧ ವಿಭಾಗ ಠಾಣಾಧಿಕಾರಿ ಗಂಗಾಧರಪ್ಪ ಅವರು ಕಾನೂನು ಪಾಲನೆ ಬಗ್ಗೆ ವಿವರಿಸಿದರು. ಪ್ರಮುಖರಾದ ಹಮೀದ್ ಗೋಲ್ಡನ್ ಕಲ್ಲಡ್ಕ, ಶೇಖಬ್ಬ ಕಾರಾಜೆ, ಬಿ.ಅಬೂಬಕ್ಕರ್ ಆಲಡ್ಕ, ಉಮ್ಮರ್ ಪಾಣೆಮಂಗಳೂರು, ಯೂಸುಫ್ ಮಿತ್ತಬೈಲು, ಶಾಹುಲ್ ಹಮೀದ್ ನಂದಾವರ, ಅಬೂಸ್ವಾಲಿಹ್ ಪಿ.ಜೆ. ಅಕ್ಕರಂಗಡಿ, ಲತೀಫ್ ಖಾನ್ ಗೂಡಿನಬಳಿ, ಅಬ್ದುಲ್ ಮಜೀದ್ ನಂದಾವರ, ಲತೀಫ್ ಕಾರಾಜೆ, ಉಬೈದುಲ್ಲಾ ಗೂಡಿನಬಳಿ ಮತ್ತಿತರರು ಇದ್ದರು

By suddi9

Leave a Reply

Your email address will not be published. Required fields are marked *