ಬಂಟ್ವಾಳ,  ವಿವಿಧಜನಪರ ಹೋರಾಟಗಳ ಮೂಲಕ ಅವಿಭಜಿತದ.ಕ. ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಹಾಗೂ ಕ್ರಾಂತಿಕಾರಿ ಬದಲಾವಣೆಗಳಿಗೆ ಪ್ರತಾಪ್‍ಚಂದ್ರ ಶೆಟ್ಟಿಕಾರಣರಾಗಿದ್ದಾರೆ.ಅವರನ್ನು ಮತ್ತೆ ಆಯ್ಕೆಗೊಳಿಸಿ ವಿಧಾನಪರಿಷತ್‍ಗೆ ಕಳುಹಿಸಬೇಕಾದ್ದು ನಮ್ಮೆಲ್ಲರಜವಬ್ದಾರಿಎಂದುರಾಜ್ಯ ನಗರಾಭಿವೃದ್ಧಿ ಸಚಿವ ವಿನಯ್‍ಕುಮಾರ್ ಸೊರಕೆ ಹೇಳಿದರು.
ಪಾಣೆಮಂಗಳೂರು ಬ್ಲಾಕ್‍ಕಾಂಗ್ರೆಸ್ ವತಿಯಿಂದ ವಿಧಾನ ಪರಿಷತ್‍ಚುನಾವಣೆಯ ಪ್ರಯುಕ್ತ ವೀರಕಂಭಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯರಾದವರುಗ್ರಾಮ ಪಂಚಾಯತ್‍ಗಳಿಗೆ ಭೇಟಿ ನೀಡುವಅಭಿಯಾನವನ್ನು ಆರಂಭಿಸಿದ ಪ್ರತಾಪ್‍ಚಂದ್ರ ಶೆಟ್ಟಿಯವರು, ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ಅವರ ಹಿರಿತನ ಪಕ್ಷದ ಬಲವರ್ಧನೆಗೆ ಅನುಕೂಲ. ತನಗೆಅಧಿಕಾರ ಸಿಗಲಿಲ್ಲವೆಂದುಇಡೀ ಸಮುದಾಯಕ್ಕೆ ಸಿಗಲಿಲ್ಲ ಎನ್ನುವುದುತಪ್ಪುಎಂದಅವರು, ಈ ನಿಟ್ಟಿನಲ್ಲಿಕಾರ್ಯಕರ್ತರು ಮತದಾರರು ಹಾದಿ ತಪ್ಪದಂತೆ ಕಾಳಜಿವಹಿಸಬೇಕೆಂದರು.

24-4
ಕಾಂಗ್ರೆಸ್ ಪಕ್ಷದಅಭ್ಯರ್ಥಿ ಪ್ರತಾಪ್‍ಚಂದ್ರ ಶೆಟ್ಟಿ ಮಾತನಾಡಿ, ಬಂಟ್ವಾಳ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ತಾನು ಭೇಟಿ ನೀಡಿರುವುದಕ್ಕೆಇಲ್ಲಿ ಶಾಸಕರಾಗಿರುವರಮಾನಾಥರೈಯವರೇ ಸಾಕ್ಷಿ.ಹೊಸಬರಿಗೆ ಅವಕಾಶ ಒದಗಿಸಬೇಕೆನ್ನುವಆಶಯದಿಂದ ಸ್ಪರ್ಧಿಸಲು ಮುಂದಾಗಿರಲಿಲ್ಲ. ಆದರೆ, ಕಾರ್ಯಕರ್ತರು ಹಾಗೂ ಪಕ್ಷದ ಹೈಕಮಾಂಡ್‍ಒತ್ತಾಯದ ಹಿನ್ನೆಲೆಯಲ್ಲಿ ಸ್ಪರ್ಧಿಸುತ್ತಿದ್ದು, ಚುನಾವಣೆಯಲ್ಲಿಗೆದ್ದು ಬಂದರೆ ಕಾರ್ಯಕರ್ತರ ನಂಬಿಕೆಗಳಿಗೆ ಚ್ಯುತಿಯಾಗದಂತೆಕಾರ್ಯನಿರ್ವಹಿಸುತ್ತೇನೆಎಂದರು.
ಜಿಲ್ಲಾಉಸ್ತುವಾರಿ ಸಚಿವ ಬಿ.ರಮಾನಾಥರೈಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಾಪ್‍ಚಂದ್ರ ಶೆಟ್ಟಿ ಸತ್ಯವಂತ, ಪ್ರಾಮಾಣಿಕರಾಜಕಾರಣಿ.ಕಾಲಕ್ಕೆ ತಕ್ಕಂತೆ ಮಾತನಾಡುವವರಲ್ಲ. ಅನ್ಯಾಯವನ್ನುಅವರೆಂದಿಗೂ ಸಹಿಸುವುದಿಲ್ಲ. ಹಾಗಾಗಿ ಅವರ ಮೇಲೆ ಪಕ್ಷವೂ ಪ್ರೀತಿ ವಿಶ್ವಾಸವನ್ನು ಉಳಿಸಿಕೊಂಡಿದೆ ಎಂದರು.
ವಿಧಾನ ಪರಿಷತ್ ಸದಸ್ಯಐವನ್‍ಡಿಸೋಜಾ ಮಾತನಾಡಿದರು. ವೇದಿಕೆಯಲ್ಲಿ ಪಕ್ಷ ಪ್ರಮುಖರಾದ ಪಿಯೂಸ್‍ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಎ.ಸಿ.ಭಂಡಾರಿ, ಉಸ್ಮಾನ್‍ಕರೋಪಾಡಿ, ಪದ್ಮನಾಭರೈ, ವೀಕ್ಷಕ ಶಶಿಧರ ಹೆಗ್ಡೆ, ಗ್ರಾ.ಪಂ.ಅಧ್ಯಕ್ಷೆ ಪ್ರೇಮಲತಾ, ಮಾಧವಮಾವೆ, ಇದಿನಬ್ಬಕಲ್ಲಡ್ಕ, ಐಡಾ ಸುರೇಶ್, ವೆಂಕಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಪಾಣೆಮಂಗಳೂರು ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷಅಬ್ಬಾಸ್ ಅಲಿ ಸ್ವಾಗತಿಸಿ, ಸುಭಾಶ್ಚಂದ್ರ ಶೆಟ್ಟಿ ವಂದಿಸಿದರು.

By suddi9

Leave a Reply

Your email address will not be published. Required fields are marked *