ಬಂಟ್ವಾಳ :ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದ್ವೇಷದ ರಾಜಕಾರಣ ನಡೆಸುತ್ತಿರುವ ಮೋದಿ ಸರಕಾರದ ನೀತಿಯನ್ನು ವಿರೋಧಿಸಿ ಸಜಿಪ ಮುನ್ನೂರು ವಲಯ ಕಾಂಗ್ರೆಸ್ ವತಿಯಿಂದ ಸಾಂಕೇತಿಕ ಧರಣಿ ಜರಗಿತು. ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ, ಗ್ರಾ.ಪಂ.ಅಧ್ಯಕ್ಷ ಶರೀಫ್ ನಂದಾವರ, ಉಪಾಧ್ಯಕ್ಷೆ ನಳಿನಿ, ಪಂ.ಸದಸ್ಯರಾದ ಕಬೀರ್ ಅಹ್ಮದ್, ಜನಾರ್ಧನ್ , ದುಲ್ಸಿನ್, ಸಬ್ರುನ್ ಬೇಗಂ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮಹಮ್ಮದ್ ನಂದಾವರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
