ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂ ಮಾಜಿ ಸದಸ್ಯ, ಪುತ್ತಿಗೆ ಮಲ್ಲಕುಮೇರು ನಿವಾಸಿ ದೇಜು ಪೂಜಾರಿ(80) ಕರಿಮೆಣಸು ಕೀಳಲು ಗೇರು ಮರವನ್ನೇರಿದ್ದು, ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ.
ಕೃಷಿ ಚಟುವಟಿಕೆಗಳನ್ನು ತನ್ನ ಇಳಿವಯಸ್ಸಿನಲ್ಲೂ ಮಾಡಿಕೊಳ್ಳುತ್ತಿದ್ದ ದೇಜು ಪೂಜಾರಿ ಅವರು ರವಿವಾರ ಬೆಳಿಗ್ಗೆ 11ಗಂಟೆ ಸುಮಾರಿಗೆ ಎಂದಿನಂತೆ ತೋಟದ ಕಡೆಗೆ ತೆರಳಿದ್ದರು. ಕರಿಮೆಣಸು ಕೀಳಲು ಗೇರು ಮರವನ್ನೇರಿದ್ದು, ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ. 11 ಗಂಟೆ ವೇಳಿಗೆ ದೇಜು ಪೂಜಾರಿ ಅವರ ಮಗ ಹೇಮಚಂದ್ರ ಎಂಬವರು ತೋಟದ ಬಳಿ ನೋಡಿದಾಗ ದೇಜು ಪೂಜಾರಿ ಗಂಬೀರವಾಗಿ ಗಾಯಗೊಂಡು ಬಿದ್ದಿರುವುದು ಗಮನಕ್ಕೆ ಬಂದಿದೆ. ದೇಜು ಪೂಜಾರಿಯವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇಜು ಪೂಜಾರಿಯವರಿಗೆ ಪತ್ನಿ, 1ಹೆಣ್ಣು ಹಾಗೂ 3 ಗಂಡು ಮಕ್ಕಳನ್ನು ಅಗಲಿದ್ದಾರೆ.