ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169 (ಹಳೆಯ 13) ಹಾದು ಹೋಗುವ ಮಿಜಾರು ಬೆಳ್ಳೆಚಾರು ತಿರುವಿನಲ್ಲಿ ಮೂಡುಬಿದಿರೆಯಿಂದ ಮಂಗಳೂರು ಬೊಂದೆಲ್ ಕಡೆಗೆ ಸಾಗುತ್ತಿದ್ದ ಕಾರೊಂದು ರಸ್ತೆ ಬಿಟ್ಟು ಕೆಳಗಿನ ಗದ್ದೆಗೆ ಉರುಳಿ ಬಿದ್ದ ಘಟನೆ ಸೋಮವಾರ ತಡರಾತ್ರಿ 2.30ರ ವೇಳೆಗೆ ಸಂಭವಿಸಿದೆ.
ಮಗುಚಿ ಬಿದ್ದ ಕಾರಿನ ಗಾಜು ಒಡೆದು ಒಳಗಿದ್ದ ನಾಲ್ವರು ಯಾವುದೇ ಸುರಕ್ಷಿತವಾಗಿ ಹೊರಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
