ಕಲ್ಲಡ್ಕ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆ ಕಲ್ಲಡ್ಕ ವಲಯದ ಬೋಳಂತೂರು ಒಕ್ಕೂಟಕ್ಕೆ ಸಂಬಂಧಪಟ್ಟ ಧರ್ಮಶಾಂತಿ ಸ್ವಸಹಾಯ ಸಂಘದ ದಶಮಾನೋತ್ಸವ ಕಾರ್ಯಕ್ರಮವು ದಂಡೆಮಾರು ರಾಮಚಂದ್ರ ಆಚಾರ್ಯರವರ ಮನೆಯಲ್ಲಿ ಶ್ರೀ ರಾಮಚಂದ್ರ ಆಚಾರ್ಯರವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಹತ್ತು ವರ್ಷದಿಂದ ಗುಂಪಿನ ಪ್ರಗತಿಯ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದಂತಹ ಒಕ್ಕೂಟದ ಅಧ್ಯಕ್ಷರಾದ ಶ್ರೀ ಚೆನ್ನಪ್ಪ ಪೂಜಾರಿಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆಯ ಬೋಳಂತೂರು ಒಕ್ಕೂಟಕ್ಕೆ ಸಂಬಂಧಪಟ್ಟ ಧರ್ಮಶಾಂತಿ ಎಂಬ ಸ್ವ ಸಹಾಯ ಸಂಘ ಉತ್ತಮವಾದಂತಹ ನಿರ್ವಹಣೆಯನ್ನು ಮಾಡಿ ಒಕ್ಕೂಟಕ್ಕೆ ಉತ್ತಮ ತಂಡ ಎಂದು ಗುರುತಿಸಲ್ಪಟ್ಟಿದೆ ಎಂದು ಹೇಳಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

ವಲಯದ ಮೇಲ್ವಿಚಾರಕರಾದ ಶ್ರೀಯುತ ಶಿವಪ್ಪ ಎಂ.ಕೆ.ಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆ ಯಿಂದ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಮತ್ತು ಕುಟುಂಬದ ಅಭಿವೃದ್ಧಿ ಯಾಗಿರುತ್ತದೆ. ಈ ನಿಟ್ಟನಲ್ಲಿ ಧರ್ಮಶಾಂತಿ ಸ್ವಸಹಾಯ ಸಂಘ ಕೂಡ ಯೋಜನೆಯ ನಿಯಮದಂತೆ ಎಲ್ಲಾ ವ್ಯವಹಾರವನ್ನು ಉತ್ತಮವಾಗಿ ಮಾಡಿ ಪ್ರತೀ ಕುಟುಂಬದ ಅಭಿವೃದ್ಧಿಯಾಗಿರುತ್ತದೆ ಎಂದು ಕಾರ್ಯಕ್ರಮದ ಬಗ್ಗೆ ಉತ್ತಮ ಅಭಿಪ್ರಾಯ ಪಟ್ಟಿರುತ್ತಾರೆ.
ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿಯಾದ ಕುಮಾರಿ ವನಿತಾ ಮತ್ತು ಉಪಾಧ್ಯಕ್ಷರಾದ ಮೋಹನ, ಸುಂದರ ಆಚಾರ್ಯ , ಶ್ರೀಮತಿ ಸೀತಾ ಇವರು ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಹರಿಣಾಕ್ಷಿಯವರು ಸ್ವಾಗತಿಸಿ, ಶಾರದಾರವರು ಧನ್ಯವಾದವಿತ್ತರು, ಸೇವಾ ಪ್ರತಿನಿಧಿ ಕುಮಾರಿ ವನಿತಾರವರು ಕಾರ್ಯಕ್ರಮ ನಿರೂಪಿಸಿದರು.