ಬಂಟ್ವಾಳ: ಬಂಟ್ವಾಳ ತಾಲೂಕು ವಾಮದಪದವು  ಬಿಜೆಪಿ ವಲಯ ಸಮಿತಿಯ ಚುನಾವಣಾ ಕಛೇರಿ ವಾಮದಪದವಿನ ಸಹನಾ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಗೊಂಡಿತು.0302pkt7

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ಸುಲೋಚನ ಜಿ.ಕೆ.ಭಟ್ ಅವರು ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ, ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಅತ್ಯಕ ಮತಗಳಿಂದ ಚುನಾಯಿಸಿ ಬಿಜೆಪಿಗೆ ಗೆಲುವು ತಂದು ಕೊಡುವಂತೆ ಕರೆ ನೀಡಿದರು.

ಸಂಗಬೆಟ್ಟು ಜಿ.ಪಂ.ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಎಂ.ತುಂಗಪ್ಪ ಬಂಗೇರ, ವಾಮದಪದವು ಬಿಜೆಪಿ ವಲಯ ಸಮಿತಿ ಅಧ್ಯಕ್ಷ, ಗ್ರಾ.ಪಂ.ಸದಸ್ಯ ಜಯರಾಮ ಶೆಟ್ಟಿ ಕಾಪು, ಪ್ರ.ಕಾರ್ಯದರ್ಶಿ    ಚಂದ್ರಶೇಖರ ಶೆಟ್ಟಿ, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕುಮಂಗಿಲ, ಇರ್ವತ್ತೂರು ಗ್ರಾ.ಪಂ.ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್,  ಚೆನ್ನೈತ್ತೋಡಿ ತಾ.ಪಂ.ಬಿಜೆಪಿ ಅಭ್ಯರ್ಥಿ  ಆಶಾ ಜಯರಾಮ ಶೆಟ್ಟಿ, ಪ್ರಮುಖರಾದ ಸಂಜೀವ ಶೆಟ್ಟಿ,  ರಾಮ ಮಡಿವಾಳ,  ವಿಜಯ ರೈ ಆಲದಪದವು,  ಪುರುಷೋತ್ತಮ ಶೆಟ್ಟಿ ಬಾರೆಕ್ಕಿ ನಡೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *