ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಕೆಎ 18ಎ 9163 ಮಹಿಷ ಮರ್ದ್ದಿನಿ ಹೆಸರಿನ ಪಿಕಪ್ ವಾಹನವು ವಿಟ್ಲ ಪಡ್ನೂರು ಗ್ರಾಮದ ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನದ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಟೆಲಿಫೋನ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ವಾಹನದಲ್ಲಿದ್ದವರು ಪರಾರಿಯಾಗಿದ್ಧಾರೆ. ಡಿಕ್ಕಿ ಹೊಡೆದಾಗ ನಾಲ್ಕೈದು ಇದ್ದ ದನಗಳು ಬೆಳಗಿನ ಜಾವ ಪೋಲೀಸರು ಬರುವಾಗ ಎರಡು ದನಗಳು ಮಾತ್ರ ಇದ್ದವು. ಉಳಿದ ದನಗಳನ್ನು ವಾಹನದಲ್ಲಿದ್ದವರು ಬೇರೆ ಸಣ್ಣ ವಾಹನದಲ್ಲಿ ಸಾಗಿಸಿರಬಹುದು ಸಾರ್ವಜನಿಕರು ಶಂಕೆವ್ಯಕ್ತಪಡಿಸಿದ್ದಾರೆ.
