ಬಂಟ್ವಾಳ: ಗ್ಯಾ ಸ್ ತುಂಬಿದ ಟ್ಯಾಂಕರೊಂದು ತಾಲೂಕಿನ ತುಂಬೆ ಬಿ.ಎ. ಕಾಲೆಜಿನ ಬಳಿ ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಫೆ. 14ರಂದು ಭಾನುವಾರ  ಸಂಭವಿಸಿದೆ.

5 (1)

1

2 (3)

3 (1)
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಈ ಟ್ಯಾಂಕರ್,  ಬಿ.ಎ. ಶಾಲೆಯ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿದೆ. ಟ್ಯಾಂಕರ್ ಪಲ್ಟಿಯಾದ ಜಾಗ ಜನನಿ ಬಿಡ ಪ್ರದೇಶವಾಗಿದ್ದು, ಅನಿಲ ಸೋರಿಕೆಯಾಗದಿದ್ದರಿಂದ ಭಾರೀ ಅನಾಹುತ ವೊಂದುತಪ್ಪಿದಂತಾಗಿದೆ.  ಆದರೆ ಟ್ಯಾಂಕರ್ನಲ್ಲಿದ್ದ ಡಿಸೆಲ್ ಸೋರಿಕೆಯಾಗಿ ರಸ್ತೆಯಲ್ಲಿ  ಹರಿದಿದೆ.

ಘಟನೆಯಿಂದ ಟ್ಯಾಂಕರ್ ಚಾಲಕ ಜಯಪ್ರಕಾಶ್ಎನ್. ಗಂಭೀರಗಾಯಗೊಂಡಿದ್ದು,  ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳದಲ್ಲಿ ಕೆಲವೊತ್ತು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸ್ಥಳಕ್ಕೆ ಸಂಚಾರಿ ಠಾಣೆ, ಗ್ರಾಮಾಂತರಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *