ಬಜಪೆ: ಸ್ವಾಮಿವಿವೇಕಾನಂದ ಸೇವಾ ಸಂಸ್ಥೆ ಕಿನ್ನಿಗೋಳಿ ಇದರ ನೇತೃತ್ವದಲ್ಲಿ ಸಂಚಾರಿ ನೇತ್ರ ಘಟಕ, ವೆನ್ಲಾಕ್ ಆಸ್ಪತ್ರೆ ಮಂಗಳೂರು, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಲಯನ್ಸ್ ಕ್ಲಬ್ ನೀರುಡೆ-ಮುಚ್ಚೂರು ಇವರ ಸಹಯೋಗದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಫೆ.19 ಶುಕ್ರವಾರ ಬೆಳಿಗ್ಗೆ 9.30ರಿಂದ 12.30ರವರೆಗೆ ಬಜಪೆ ಗ್ರಾಮ ಪಂಚಾುತಿ ಸಭಾಭವನದಲ್ಲಿ ಜರುಗಲಿದೆ.
ಶಿಬಿರದಲ್ಲಿ ಕಣ್ಣಿನ ಪರೀಕ್ಷೆ, ಕಣ್ಣಿನ ಪೊರೆ ಅಪರೇಶನ್, ಔಷ, ಐಓಎಲ್ ಅಳವಡಿಕೆ, ಕನ್ನಡಕ ಉಚಿತ ನೀಡಲಾಗುವುದು. ಅಲ್ಲದೆ ಇದೇ ಸಲುವಾಗಿ ಪ್ರಯಾಣ, ಊಟ-ಉಪಹಾರ, ವಸತಿ ವ್ಯವಸ್ಥೆ ಕೂಡಾ ಉಚಿತ ವ್ಯವಸ್ಥೆ ಮಾಡಲಾಗಿದೆ. ಕಣ್ಣಿನ ಅಪರೇಷನ್‍ಗೆ ಸೂಚಿಸಲ್ಪಟ್ಟವರು ಎರಡು ದಿನಕ್ಕೆ ಬೇಕಾಗುವ ಬಟ್ಟೆ, ಊಟದ ತಟ್ಟೆ, ಲೋಟ ಹಾಗೂ ಓರ್ವ ಸಹಾಯಕರೊಂದಿಗೆ ಬರಬೇಕು. ಕೆಎಂಸಿ ಹಾಗೂ ವೆನ್ಲಾಕ್ ಆಸ್ಪತ್ರೆಯ ತಜ್ಞ ವೈದ್ಯರು ಅಪರೇಷನ್ ನಡೆಸುವರು.
ಬಜಪೆ ಸೈಂಟ್ ಜೋಸೆಫ್ ಚರ್ಚ್‍ನ ಧರ್ಮಗುರು ರೇ| ಫಾ| ಲಿಯೋ ಲೋಬೋರವರು ಶಿಬಿರ ಉದ್ಘಾಟಿಸುವರು. ಸ್ವಾಮಿವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬಜಪೆ ಪೊಲೀಸ್ ಇನ್ಸ್‍ಪೆಕ್ಟರ್ ಟಿ.ಡಿ. ನಾಗರಾಜ್, ಮುಚ್ಚೂರು-ನೀರುಡೆ ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ್ ನಾಯಕ್, ಅನಘ ಅಸೋಸಿಯೇಟ್ಸ್‍ನ ಸಂತೋಷ ನಾಯಕ್ ಅವರುಗಳ ಉಪಸ್ಥಿತಿಯಲ್ಲಿ ಶಿಬಿರ ಸಂಪನ್ನಗೊಳ್ಳಲಿದೆ ಎಂದು ವಿವೇಕಾನಂದ ಸೇವಾ ಸಂಸ್ಥೆ ಕಿನ್ನಿಗೋಳಿ ಇದರ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *