ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಬೈಲು ಸಂಪರ್ಕಿಸುವ ಗ್ರಾಮೀಣ ರಸ್ತೆಗೆ ಬಂಟ್ವಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವತಿಯಿಂದ ರೂ 3ಲಕ್ಷ ವೆಚ್ಚದಲ್ಲಿ ಬುಧವಾರ ಡಾಂಬರೀಕರಣ ಕಾಮಗಾರಿ ನಡೆಯಿತು. ಎಪಿಎಂಸಿ ಅಧ್ಯಕ್ಷ ಪಿ.ಶಾಂತಪ್ಪ ಪೂಜಾರಿ ಮತ್ತು ಸ್ಥಳೀಯ ಸದಸ್ಯ ರತ್ನಕುಮಾರ್ ಚೌಟ ಇವರಿಗೆ ನಾಗರಿಕರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
