ಮುಂಬಯಿ: ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕವು ಮತ್ತು ಮುಲುಂಡ್ ಫ್ರೆಂಡ್ಸ್ ಸಂಸ್ಥೆಯ ಸಹಯೋಗದೊಂದಿಗೆ ಇಂದಿಲ್ಲಿ ಶನಿವಾರ ಅಪರಾಹ್ನ ಮಾಟುಂಗಾ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಡಾ| ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ರಚಿತ ನಾಡೋಜ ಡಾ| ಹೆಚ್.ಎಲ್ ನಾಗೇಗೌಡರ ಜನ್ಮಶತಮಾನೋತ್ಸವ ವೇದಿಕೆಯಲ್ಲಿ`ಸೌಹಾರ್ದೋತ್ಸವ ಹಾಗೂ ಜಾನಪದ ಸಿರಿವೈಭವ2016′ ಕಾರ್ಯಕ್ರಮ ಆಯೋಜಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್‍ಕುಮಾರ್ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸೌಹಾರ್ದೋತ್ಸವ ಕಾರ್ಯಕ್ರಮದಲ್ಲಿ ಕಾಸರಗೋಡು ಬದಿಯಡ್ಕದ ಕೊರಗ ತನಿಯ ಸನ್ನಿಧಿಯ ಧರ್ಮದರ್ಶಿ ಶ್ರೀ ಗಣೇಶ್ ಉಲ್ಲೋಡಿ ಸ್ವಾಮೀಜಿ, ಕರ್ನಾಟಕ ಸರಕಾರದ ಅಲ್ಪ ಸಂಖ್ಯಾಕರ ಅಭಿವೃದ್ಧಿ ಪ್ರಾಧೀಕಾರದ ಅಧ್ಯಕ್ಷ ಜನಾಬ್ ಎಸ್.ವೈ.ಎಂ ಮಸೂದ್ ಫಾಜುದಾರ್, ಘಾಟ್ಕೋಪರ್ ಪಂತ್‍ನಗರ ಚರ್ಚ್‍ನ ಮುಖ್ಯಸ್ಥ ರೆ| ಫಾ| ನೆಲ್ಸನ್ ಸಲ್ಡಾನ್ಹಾಉಪಸ್ಥಿತರಿದ್ದು ತುಳಸೀ ಗಿಡದ ಕುಡಿಕೆಯಲ್ಲಿ ಕ್ರಮವಾಗಿ ತ್ರಿಧರ್ಮಗಳ ಸ್ತಬ್ದಚಿತ್ರಗಳನ್ನು ಹೂತು ಸೌಹಾರ್ದೋತ್ಸವಕ್ಕೆ ಚಾಲನೆ ನೀಡಿದರು ಹಾಗೂ ಶಾಂತಿ ಸೌಹಾರ್ದತೆಯ ಧ್ಯೋತಕವಾದ ಕಪೆÇೀತಗಳನ್ನು ಹಾರಿಸಿ ಸೌಹಾರ್ದೋತ್ಸವ ಸಂಭ್ರಮಕ್ಕೆ ಚಾಲನೆಯನ್ನಿತ್ತು ಅನುಗ್ರಹಿಸಿ ಶಾಂತಿಯುತ ಬಾಳಿಗೆ ಸಂದೇಶವನ್ನೀಡಿ ಮನುಕುಲದ ಸಾಮರಸ್ಯ ಸಾರುವ ಧಾರ್ಮಿಕ ಸರ್ವಸ್ವಕ್ಕೆ ಈ ಕಾರ್ಯಕ್ರಮ ಪೂರಕವಾಗಲಿ ಎಂದರು. ಅತಿಥಿಗಳಾಗಿ ಸಮಾಜ ಸೇವಕರುಗಳಾದ ಕರ್ನಿರೆ ವಿಶ್ವನಾಥ ಶೆಟ್ಟಿ, ನ್ಯಾ| ಬಿ.ಮೊಯಿದ್ಧೀನ್ ಮುಂಡ್ಕೂರು, ಡಾ| ಸುರೇಂದ್ರ ವಿ.ಶೆಟ್ಟಿ ಕಲ್ಯಾಣ್, ರಂಗಪ್ಪ ಸಿ.ಗೌಡ, ಉದ್ಯಮಿ ಸುನೀಲ್ ಪಾಯ್ಸ್, ಜಾನಪದ ಪರಿಷತ್ತುನ ಆಡಳಿತಾಧಿಕಾರಿ ಡಾ| ಕುರುವೇ ಬಸವರಾಜ್, ಕೇರಳ ಘಟಕಧ್ಯಕ್ಷ ಕೇಶವ ಪ್ರಸಾದ್ ನಾಣಿಹಿತ್ಲು ಉಪಸ್ಥಿತರಿದ್ದು, ಡಾ| ಶಿವ ಎಂ.ಮೂಡಿಗೆರೆ (ಸಾಮಾಜಿಕ ಕ್ಷೇತ್ರ), ಪ್ರಮೋದ್ ಕರ್ಕೇರ ಅಡ್ವೆ (ಉದ್ಯಮ ಕ್ಷೇತ್ರ), ಡಾ| ಮುನೀರ್ ಬಾವ (ರಾಜಕೀಯ ಕ್ಷೇತ್ರ), ನಾರಾಯಣ ಮಾಟೆ ಕಾಸರಗೋಡು (ಸಾಂಸ್ಕೃತಿಕ ಕ್ಷೇತ್ರ), ಎಮ್ಸ್ ಕಾಲೇಜು ಕಡಬ ಇದರ ಸಾಧಕೀಯರುಗಳಾದ ಕು| ಬಿ.ಎಸ್ ಫಾಜ್ಹಿಯಾ ಮತ್ತು ಕು| ಕೆ.ಎ ಸಮೀರಾ ಅವರಿಗೆ ಸೌಹಾರ್ದೋತ್ಸವ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು. ಅತಿಥಿಗಳು ಸಂದರ್ಭೋಚಿತವಾಗಿ ಮಾತನಾಡಿ ಸೌಹಾರ್ದತೆಯ ಮೌಲ್ಯವನ್ನು ಅರಿತು ಸಂತುಷ್ಟ ಬಾಳನ್ನು ರೂಪಿಸುವಲ್ಲಿ ನಾವೆಲ್ಲರೂ ಬದ್ಧರಾಗೋಣ ಎಂದು ಕರೆಯಿತ್ತರು.
ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಡಾ| ನಿತ್ಯಾನಂದ ಬಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಮೂಲ ನಂಬಿಕೆ ಮತ್ತು ಮೂಢ ನಂಬಿಕೆ ವಿಚಾರಿತ ಗೋಷ್ಠಿಯಲ್ಲಿ ಅಂತರಾಷ್ಟ್ರೀಯ ಪ್ರಸಿದ್ಧಿಯ ನಾಡಿನ ಹೆಸರಾಂತ ಸಿದ್ಧಾಂತವಾದಿ, ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟದ ರಾಷ್ಟ್ರಧ್ಯಕ್ಷ ಡಾ| ನರೇಂದ್ರ ನಾಯಕ್ ಅವರು ಮೂಢ ನಂಬಿಕೆಯ ಬಗ್ಗೆ ವಿಚಾರ ಮಂಡಿಸಿದರು. ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಮತ್ತು ಸಾಹಿತಿ ರವಿ ರಾ.ಅಂಚನ್ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ದಯಾಸಾಗರ್ ಚೌಟ ಗೋಷ್ಠಿಯನ್ನು ನಿರ್ವಹಿಸಿದರು. ತಾರಾ ಬಂಗೇರಪ್ರಾರ್ಥನೆಯನ್ನಾಡಿದರು. ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ ಸ್ವಾಗತಿಸಿ ಸಭಾಧ್ಯಕ್ಷರನ್ನು ಗೌರವಿಸಿದರು. ಮುಲುಂಡ್ ಫ್ರೆಂಡ್ಸ್‍ನ ಕೋಶಾಧಿಕಾರಿ ವೇಣು ಗೋಪಾಲ ಶೆಟ್ಟಿ ಇರಾ, ಜೊತೆ ಕಾರ್ಯದರ್ಶಿ ಯುವರಾಜ್ ಶೆಟ್ಟಿ, ಜೊತೆ ಕೋಶಾಧಿಕಾರಿ ನವೀನ್ ಹೆಗ್ಡೆ ಪುಷ್ಪಗುಚ್ಛ ನೀಡಿ ಅತಿಥಿüಗಳನ್ನು ಗೌರವಿಸಿದರು.ಕಾರ್ಯಕ್ರಮದಲ್ಲಿ ಜಾನಪದ ನೃತಸ್ಪರ್ಧೆಯನ್ನು ನಡೆಸಲಾಗಿದ್ದು ಮೋಹನ್ ರೈ ಸ್ಪರ್ಧೆ ನಿರ್ವಹಿಸಿದರು. ಅಶೋಕ್ ಪಕ್ಕಳ ಸೌಹಾರ್ದೋತ್ಸವ ಸಭಾ ಕಾರ್ಯಕ್ರಮ ನಿರೂಪಿಸಿದರು. ಮುಲುಂಡ್ ಫ್ರೆಂಡ್ಸ್‍ನ ಕಾರ್ಯದರ್ಶಿ ದಯಾನಂದ ದೇವಾಡಿಗ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಹಾನಗರದಲ್ಲಿನ ವಿವಿಧ ಸಂಸ್ಥೆಗಳ ತಂಡಗಳು ಜಾನಪದ ನೃತ್ಯಾವಳಿಗಳನ್ನು ಪ್ರದರ್ಶಿಸಿದರು.
















