ಭಾರತ್ ಬ್ಯಾಂಕ್‍ನ ಭಗೀರಥ ಸಾಧನೆಗೆ ಬಹುಶ್ರೇಷ್ಠ ಬ್ಯಾಂಕ್‍ಗೌರವ
ಮುಂಬಯಿ: ಸಹಕಾರಿ ರಂಗದ ಆಥಿರ್üಕ ಸೇವೆಯಲ್ಲಿ ರಾಷ್ಟ್ರದಾದ್ಯಂತ ಪ್ರಸಿದ್ಧಿ ಪಡೆದ ತುಳು-ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಸಂಸ್ಥೆಗೆ ಮುಂಬಯಿ ಜಿಲ್ಲಾ ಮಧ್ಯವರ್ತಿ ಸಹಕರಿ ಬ್ಯಾಂಕ್ (ರಿ.) ಸಂಸ್ಥೆಯ `ಮುಂಬಯಿ ಬ್ಯಾಂಕ್ ಸಹಕಾರ್ ಪುರಸ್ಕಾರ್’ ಪ್ರಾಪ್ತಿಯಾಗಿದ್ದು, ಇಂದಿಲ್ಲಿ ಮಂಗಳವಾರ ಸಂಜೆ ಮಾಟುಂಗಾ ಪಶ್ಚಿಮದ ಅಖಿಲ ಭಾರತೀಯ ಮರಾಠಿ ನಾಟ್ಯ ಪರಿಷದ್ ಇದರ ಯಶವಂತ ನಾಟ್ಯ ಮಂದಿದರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪುರಸ್ಕಾರ ಪ್ರದಾನಿಸಿ ಗೌರವಿಸಿತು. ಜಿಲ್ಲಾ ಸಹಕರಿ ಬ್ಯಾಂಕ್ ಅಧ್ಯಕ್ಷ ಪ್ರವೀಣ್ ಯಶವಂತ್ ದರೆಕರ್ ಅವರಿಂದಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಉಪಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ(ಸಿಇಒ) ಅವರು ಪುರಸ್ಕಾರ ಸ್ವೀಕರಿಸಿದರು. ಸಹಕಾರ ಕ್ಷೇತ್ರದಲ್ಲಿ ಶ್ರಮದಾಯಕ, ಸಮರ್ಪಿತ ಸೇವಾ ನಿರ್ವಾಹಿಸಿ ಜನಸಾಮಾನ್ಯರ ಹಣಕಾಸು ಬೇಡಿಕೆಗಳಿಗೆ ಶೀಘ್ರಗತಿಯಲ್ಲಿ ಸ್ಪಂದಿಸಿ ಅತ್ಯಾಧುನಿಕ ತಂತ್ರಜ್ಞಾನಗಳ ಸೌಲಭ್ಯ ಬಳಕೆಯೊಂದಿಗೆ ಸರಳೀಕರಣವಾದ ಭಾರತ್ ಬ್ಯಾಂಕ್‍ನ ಸೇವೆ ಅನನ್ಯವಾದದ್ದು.
Bank Sahakar Puraskar-1

Bank Sahakar Puraskar-4

Bank Sahakar Puraskar-5

Bank Sahakar Puraskar-6

Bharat Bank Bank Sahakar Puraskar-A1ಗತ ಹಣಕಾಸು ಸಾಲಿನಲ್ಲಿ ಗುಣಮಟ್ಟದ ಹಣಕಾಸು ಸೇವೆಯನ್ನೊದಗಿಸಿ ಗ್ರಾಹಕರ ಅಪಾರ ಜನಮನ್ನಣೆಗೆ ಪಾತ್ರವಾಗಿರು ವುದು ಶ್ಲಾಘನೀಯ. ಸಮೃದ್ಧಿತ ಅತ್ಯುತ್ತಮ ವಾರ್ಷಿಕ ವರದಿ ಸೇರಿದಂತೆಬ್ಯಾಂಕ್‍ನ ಸವಿಸ್ತಾರ ಮಾಹಿತಿ ಆಧಾರಿಸಿ ಈ ಪುರಸ್ಕಾರಕ್ಕೆ ಆಯ್ಕೆಗೊಳಿಸಲಾಗಿದೆಎಂದು ಪ್ರಸ್ತಾಪಿಸಿ ಜಿಲ್ಲಾ ಸಹಕರಿ ಬ್ಯಾಂಕ್ ಮುಖ್ಯಸ್ಥರು ಭಾರತ್ ಬ್ಯಾಂಕ್‍ಗೆ `ಬಹುಶ್ರೇಷ್ಠ ಬ್ಯಾಂಕ್ ಪುರಸ್ಕಾರ’ ಪ್ರದಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿಜಿಲ್ಲಾ ಸಹಕರಿ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷ ಪುರುಷೋತ್ತವ ದಳ್ವಿ, ಪ್ರಧಾನ ಪ್ರಬಂಧಕ ಡಿ.ಎಸ್ ಕದಂ, ಸಂಚಾಲಕರುಗಳಾದ ಸಂದೀಪ್ ಎಸ್.ಘಂದಟ್, ಕ್ಯಾ| ಅಭಿಜಿತ್ ಎ.ಅಡ್ಸೂಲ್, ಜಯಶ್ರೀ ಎಸ್.ಪಂಚಾಲ್, ಪ್ರಸಾದ್ ಎಂ.ಲಡ್, ಶಿವಾಜಿರಾವ್ ನಲಾವಡೆ, ಕವಿತಾ ಪಿ.ದೇಶ್‍ಮುಖ್, ವಿಠಲ್ ಎನ್.ಭೋಸ್ಲೆ, ಅಭಿಷೇಕ್ ವಿ.ಘೊಸಾಳ್ಕರ್ ಶಿಲ್ಪಾ ಎ.ಸಪೆರ್Çೀತ್‍ದರ್ ಭಾರತ್ ಬ್ಯಾಂಕ್‍ನನಿರ್ದೇಶಕರುಗಳಾದ
ಚಂದ್ರಶೇಖರ ಎಸ್.ಪೂಜಾರಿ, ಜ್ಯೋತಿ ಕೆ. ಸುವರ್ಣ, ಯು.ಎಸ್ ಪೂಜಾರಿ, ನ್ಯಾ| ಎಸ್.ಬಿ ಅವಿೂನ್, ದಾಮೋದರ ಸಿ.ಕುಂದರ್, ಕೆ.ಬಿ ಪೂಜಾರಿ, ಅಶೋಕ್ ಎಂ.ಕೋಟ್ಯಾನ್, ಗಂಗಾಧರ್ ಜೆ.ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ಮುಖ್ಯ ಪ್ರಧಾನ ಪ್ರಬಂಧಕ ಅನಿಲ್‍ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕರುಗಳಾದ ಶೋಭಾ ದಯಾನಂದ್, ನಿತ್ಯಾನಂದ ಡಿ.ಕೋಟ್ಯಾನ್, ಉಪ ಮಹಾ ಪ್ರಂಬಧಕ ಹಾಗೂ ಬ್ಯಾಂಕ್‍ನ ಅಭಿವೃದ್ಧಿ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ, ಶ್ರೀನಿವಾಸ ಆರ್.ಕರ್ಕೇರ ಮತ್ತಿತರರು ಉಪಸ್ಥಿತರಿದ್ದು ಪುರಸ್ಕಾರಕ್ಕಾಗಿ ಅಭಿಮಾನ ವ್ಯಕ್ತಪಡಿಸಿದರು.

By suddi9

Leave a Reply

Your email address will not be published. Required fields are marked *