ಮೂಡಬಿದರೆ: ಮಂಗಳೂರು ವಿಶ್ವವಿದ್ಯಾನಿಲಯದ, ಅರ್ಥಶಾಸ್ತ್ರ ವಿಭಾಗ ಆಯೋಜಿಸಿದ್ದ ಅಂತರ್ ಕಾಲೇಜು ಸ್ಪರ್ಧೆ `ವೇವ್ಸ್ 2016′ ರಲ್ಲಿ ಮೂಡುಬಿದರೆಯ ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಸೃಜನ ಶೀಲ ಬರವಣಿಗೆಯಲ್ಲಿ ವಸುಧಾ ಎನ್ ರಾವ್,ಎಕ್ಸ್‍ಟೆಂಪೆÇೀರ್ ಸ್ಪರ್ಧೆಯಲ್ಲಿ ದಕ್ಷಾ ಡಿ ಜೈನ್ ಪ್ರಥಮಪ್ರಬಂಧ ಮಂಡನಾ ಸ್ಪರ್ಧೆಯಲ್ಲಿ ಸಂಗೀತಾ ನಾಯಕ್ ಮತ್ತು ರಮ್ಯಾ ರಾವ್ ದ್ವಿತೀಯ, ಹಾಗೂ ಬಜೆಟ್ ತಯಾರಿಕೆ ಸ್ಪರ್ಧೆಯಲ್ಲಿ ವಾಸುದೇವ ಪ್ರಭು ದ್ವಿತೀಯ ಸ್ಥಾನ ಪಡೆದಿದ್ದಾರೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಜ್ವಲ್ ಭಟ್ ಮತ್ತು ಕ್ಲೇರಿ ಮೆಲ್ವಿನ್ ಭಾಗವಹಿಸಿದ್ದರು.
mbd_march23_6ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ದೀಕ್ಷಿತ್, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ. ರಮೇಶ್ ಭಟ್ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *