ಶಿಕ್ಷಣ ಮಾನವೀಯತೆ ಪ್ರತಿನಿಧಿಸುವ ತತ್ವ
ಮೂಡುಬಿದರೆ: ಚಾರಿತ್ರಿಕ, ಸಾಂಸ್ಕ್ರತಿಕ ಮೌಲ್ಯಗಳು, ತನ್ನದೇ ವಿಶಿಷ್ಟ ಪರಂಪರೆಯನ್ನು ಹೊಂದಿರುವ ದೇಶ ಭಾರತ. ಪ್ರಾಚೀನ ಕಾಲದಿಂದಲೇ ಶಿಕ್ಷಣ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಭಾರತೀಯ ಶಿಕ್ಷಣ ಪದ್ಧತಿ ಮಾನವೀಯತೆಯನ್ನು ಪ್ರತಿನಿಧಿಸುವಂತದ್ದು. ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯೊಂದಿಗೆ ಪ್ರತಿಭೆ, ಸಾಮಥ್ರ್ಯದೊಂದಿಗೆ ಸಾಧನೆ ಮಾಡಿದರೆ ಜಗತ್ತಿನಲ್ಲೇ ಭಾರತ ಅಗ್ರಗಣ್ಯವಾಗುತ್ತದೆ ಎಂದು ಕಾಸರಗೋಡು ಕೇಂದ್ರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಜಿ.ಗೋಪ ಕುಮಾರ್ ಹೇಳಿದರು.
ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶ್ರೇಷ್ಠ ಆಧ್ಮಾತ್ಮಿಕ ಚಿಂತನೆಯನ್ನು ಹೊಂದಿರುವ ದೇಶ, ಶಿಕ್ಷಣ ಕ್ರಾಂತಿಯಿಂದಾಗಿ ಸಾತ್ವಿಕವಾಗಿ ಬೆಳೆಯುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಮಾತನಾಡಿ, ಇಂಜಿನಿಯರಿಂಗ್ ಕಾಲೇಜುಗಳಿಂದ ವರ್ಷಕ್ಕೆ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಉದ್ಯೋಗದತ್ತ ಮುಖ ಮಾಡುತ್ತಾರೆ. ಆದರೆ ಅದರಲ್ಲಿ ಶೇ.25 ಮಾತ್ರ ಅರ್ಹ ಇಂಜಿನಿಯರ್ಗಳಾಗುತ್ತಾರೆ. ಜಾಗತಿಕ ಮಟ್ಟದಲ್ಲಿರುವ ಸ್ಪರ್ಧೆಯನ್ನು ಗಮನಿಸಿ, ಅಧ್ಯಯನದಲ್ಲಿ ಬದ್ಧತೆಯೊಂದಿಗೆ ಮುನ್ನಡೆದರೆ ಶಿಕ್ಷಣ, ಉದ್ಯೋಗರಂಗ ಮಾತ್ರವಲ್ಲ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.
ಯೆನೆಪೋಯ ವಿ.ವಿ.ಯ ಉಪಕುಲಪತಿ ಯೆನೆಪೋಯ ಅಬ್ದುಲ್ಲಾ ಕುಂಞ ಮುಖ್ಯ ಅತಿಥಿಯಾಗಿ ಮಾತನಾಡಿ, ಸದ್ವಿಚಾರಗಳು ವಿದ್ಯಾರ್ಥಿಗಳಿಗೆ ಪಕ್ವತೆಯನ್ನು ನೀಡುತ್ತದೆ. ಪಾರದರ್ಶಕತೆ ಆಡಳಿತ ವ್ಯವಸ್ಥೆ, ಗುಣಮಟ್ಟದ ಶಿಕ್ಷಣಕ್ಕೆ ಯೆನೆಪೋಯ ಸಂಸ್ಥೆ ಅಧ್ಯತೆ ನೀಡುತ್ತಿದೆ ಎಂದರು.
ದೇರಳಕಟ್ಟೆಯಲ್ಲಿರುವ ಐಎಇ ಅಧ್ಯಕ್ಷ ಮಹಮ್ಮದ್ ಕುಂಞ, ಐಎಇ ಟ್ರಸ್ಟಿಗಳಾದ ಡಾ.ಸಿ.ಪಿ ಹಬೀಬ್ ರೆಹಮಾನ್, ಅಬ್ದುಲ್ ಜಾವೇದ್, ಯೆನೆಪೋಯ ಅಬ್ದುಲ್ಲಾ ಜಾವೀದ್, ಅಕ್ತಾರ್ ಹುಸೈನ್, ಯೆನೆಪೋಯ ವಿ.ವಿ ನಿರ್ದೇಶಕ ಡಾ.ಶ್ರೀಕುಮಾರ್ ಮೆನನ್, ಪ್ರಾಂಶುಪಾಲ ಸಂದೀಪ್ ಜೆ.ನಾಯಕ್ ಉಪಸ್ಥಿತರಿದ್ದರು.
ಮಮತಾ, ನಝೀಯಾ ಅಬ್ದುಲ್ ಕಾರ್ಯಕ್ರಮ ನಿರೂಪಿಸಿದರು. ಶಂಕರ್ ಎನ್ ಉಪಧ್ಯಾಯ ವಂದಿಸಿದರು.
189 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:
ಕಾಲೇಜಿನ ಇ ಎಂಡ್ ಸಿ,ಸಿಎಸ್, ಐಎಸ್, ಇಇ, ಎಂಇ ವಿಭಾಗಗಳ ಒಟ್ಟು 189 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಬಸವರಾಜಪ್ಪ ವೈ.ಎಚ್, ಗಂಗಾಧರ, ಗುರುಪ್ರಸಾದ್, ಪಾಡು ನಾೈಕ್, ಪ್ರಸನ್ನ ಕುಮಾರ್ ಪದವಿ ಪಡೆದ ವಿದ್ಯಾರ್ಥಿಗಳ ವಿವರ ನೀಡಿದರು.